ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿದ ಆರೋಪವನ್ನು ನಟಿ ಶೃತಿ ಹರಿಹರನ್ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಫೇಸ್ ಬುಕ್ ನಲ್ಲಿ ಏನಿದೆ?:
ನಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳನ್ನು ಹೇಳಿಕೊಳ್ಳಲು #MeToo ಅಭಿಯಾನವೊಂದು ವೇದಿಕೆಯಾಗಿದೆ. ಈ ಮೂಲಕ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಹೊರಹಾಕಲಾಗುತ್ತಿದೆ.
Advertisement
ಹಾಗೆಯೇ ನನಗೂ ಇಂದು ನನ್ನ ಮೌನ ಮುರಿಯುವ ಸಮಯವಿದು. ನನ್ನಂತೆ ಸಮಾಜದ ಬಹಳಷ್ಟು ಹೆಣ್ಣು ಮಕ್ಕಳು ಯಾತನೆ ಅನುಭವಿಸಿದ್ದಾರೆ. ಇಲ್ಲಿ ನಾನು ಅನುಭವಿಸಿದ ಯಾತನೆಯನ್ನು ಬಹಿರಂಗಪಡಿಸಿದ್ದೇನೆ. ನನಗೆ ಅರ್ಜುನ್ ಸರ್ಜಾ ಮಾತ್ರವಲ್ಲದೇ ಬಹಳಷ್ಟು ಮಂದಿಯಿಂದ ಮೀಟೂ ಅನುಭವವಾಗಿದೆ. ಈ ಬಗ್ಗೆ ಹೇಳಿಕೊಳ್ಳಲು ಧೈರ್ಯ ಮಾಡಿದ್ದೇನೆ. ಮಾತ್ರವಲ್ಲದೇ ಈ ಬಗ್ಗೆ ಶೀಘ್ರವೇ ಪತ್ರಿಕಾಗೋಷ್ಠಿ ನಡೆಸಿ ಇನ್ನೊಂದಷ್ಟು ವಿಚಾರಗಳನ್ನು ತಿಳಿಸುವುದಾಗಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
Advertisement
18 ವರ್ಷದವಳಿದ್ದಾಗಲೇ ನನಗೆ ಚಿತ್ರರಂಗದ ದೌರ್ಜನ್ಯದ ಬಗ್ಗೆ ಅನುಭವವಾಗಿದೆ. ಚಿತ್ರರಂಗದ ಹಿರಿಯರೊಬ್ಬರು ನನ್ನ ಕಾಲನ್ನೂ ಕೂಡ ಹಿಡಿದಿದ್ರೂ, ನಾನು ಭಯದಿಂದ ಓಡಿಹೋಗಿದ್ದೆ ಅಂತ ಚಿಂತ್ರರಂಗದಲ್ಲಿ ಅನುಭವಿಸಿದ್ದ ಯಾತನೆಗಳನ್ನು ಈ ಹಿಂದೆ ಶೃತಿ ಅವರು ಎಳೆಎಳೆಯಾಗಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡುತ್ತಾ ಬಿಚ್ಚಿಟ್ಟಿದ್ದರು.
Advertisement
ಆರೋಪವೇನು?:
ಕಳೆದ ವರ್ಷ ‘ವಿಸ್ಮಯ’ ಅನ್ನೋ ಸಿನಿಮಾವೊಂದನ್ನು ನಾನು ಮಾಡಿದ್ದೆ. ಚಿತ್ರದಲ್ಲಿ ಅರ್ಜುನ್ ಅರ್ಜಾ ಅವರು ನನ್ನ ಸಹನಟನಾಗಿ ಅಭಿನಯಿಸಿದ್ದರು. ‘ವಿಸ್ಮಯ’ ಸಿನಿಮಾಕ್ಕೂ ಮೊದಲು ನಾನು ಹಲವು ಸಿನಿಮಾಗಳನ್ನು ಮಾಡಿದ್ದೇನೆ. ಹಲವು ನಟರ ಜೊತೆಯೂ ಅಭಿನಯಿಸಿದ್ದೇನೆ. ಇಂದಿಗೂ ನನಗೆ ಬೇರೆ ನಟರ ಜೊತೆ ನಟಿಸುವಾಗ ಯಾವ ತೊಂದರೆಗಳೂ ಆಗಿಲ್ಲ. ಚಿತ್ರೀಕರಣದ ಸಂದರ್ಭದಲ್ಲಿ ನಾವು ಪರಸ್ಪರ ಗೌರವದಿಂದಲೇ ನಡೆದುಕೊಳ್ಳುತ್ತಿದ್ದೇವು. ನಾಯಕ-ನಾಯಕಿಯ ನಡುವಿನ ಪ್ರಣಯದ ದೃಶ್ಯಗಳನ್ನು ಚಿತ್ರೀಕರಿಸುವ ಸಂದರ್ಭಗಳಲ್ಲಿಯೂ ಕಲಾವಿದರ ನಡುವೆ ಬಹುಸೂಕ್ಷ್ಮವಾದ ಒಂದು ಗಡಿ ರೇಖೆ ಇರುತ್ತದೆ. ಅದನ್ನು ಮೀರಿ ನಾವು ನಡೆದುಕೊಳ್ಳುತ್ತಿರಲಿಲ್ಲ. ಒಂದು ವೇಳೆ ಆ ರೇಖೆಯನ್ನು ದಾಟಿದ್ರೆ ಹೆಣ್ಣಿಗೆ ಇರುಸು ಮುರುಸು ಉಂಟಾಗಲು ಆರಂಭವಾಗುತ್ತದೆ. ‘ವಿಸ್ಮಯ’ ಚಿತ್ರದ ಶೂಟಿಂಗ್ ವೇಳೆ ಆಗಿದ್ದು ಇದೇ. ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ಅವರು ಗಡಿರೇಖೆ ದಾಟಿದ್ದರು ಅಂತ ಅವರು ಮ್ಯಾಗಜಿನ್ ಒಂದು ಸಂದಶನದ ವೇಳೆ ನಡೆದಿದ್ದ ಘಟನೆಯ ಮೆಲುಕು ಹಾಕಿದ್ದರು.
ಚಿತ್ರದಲ್ಲಿ ನಾನು ಅವರ ಹೆಂಡತಿಯಾಗಿ ನಟಿಸುತ್ತಿದ್ದೆ, ಅದರ ಪ್ರ್ಯಾಕ್ಟೀಸ್ ಮಾಡುತ್ತಿದ್ದೆವು. ಆಗ ಸರ್ಜಾ ‘ಇನ್ನೊಂಚೂರು ಹೀಗೆ ಪ್ರಾಕ್ಟೀಸ್ ಮಾಡಬಹುದಲ್ವಾ?’ ಅಂತ ಹೇಳಿ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡರು. ಅವರ ಆ ಅಪ್ಪುಗೆಯಿಂದ ಒಮ್ಮೆಲೆ ನಾನು ತಬ್ಬಿಬ್ಬಾಗಿದ್ದು, ಆ ವರ್ತನೆ ತುಂಬಾನೇ ಅಸಹ್ಯವಾಗಿತ್ತು. ಇದರಿಂದ ನನಗೆ ಇರಿಸು ಮುರುಸು ಉಂಟಾಗಿದ್ದು, ಕೂಡಲೇ ನಿರ್ದೇಸಕರ ಬಳಿ ತೆರಳಿ ‘ಇನ್ನು ಮುಂದೆ ನಾನು ರಿಹರ್ಸಲ್ ಗೆ ಬರಲ್ಲ, ಬರೀ ಶೂಟಿಂಗ್ ಗಷ್ಟೇ ಕರೆಯಿರಿ’ ಅಂತ ಹೇಳಿ ಬಂದುಬಿಟ್ಟೆ. ಆ ಬಳಿಕ ನಾನು ಬರೀ ಶೂಟಿಂಗ್ ಗೆ ಮಾತ್ರ ಹೋಗಿ ಬರುತ್ತಿದ್ದೆ ಅಂತ ಶೃತಿ ಹೇಳಿದ್ದರು.
ಇಷ್ಟೆಲ್ಲಾ ಆದ್ರೂ ಅರ್ಜುನ್ ಸರ್ಜಾ ಮಾತ್ರ ವಿಚಲಿತನಾದಂತೆ ಕಾಣಲಿಲ್ಲ. ಯಾಕಂದ್ರೆ ಅದಾದ ಬಳಿಕ ಅವರು ನನ್ನ ಜೊತೆ ಮಾತನಾಡುವಾಗಲೂ ಬಳಸಿದ ಭಾಷೆ ಸಭ್ಯವಾಗಿರಲಿಲ್ಲ. ಪದೇ ಪದೇ ಡಿನ್ನರ್ ಗೆ ಕರೆಯುತ್ತಿದ್ದರು. ‘ರೆಸಾರ್ಟ್ ಗೆ ಹೋಗೋಣ ಬಾ’ ಎಂದು ಕರೆಯಲು ಆರಂಭಿಸಿದ್ರು. ಹೀಗೆ ಕರೆಯುವಾಗ ನಾನು ನೇರವಾಗಿ ‘ಇಲ್ಲ, ನಾನು ಬರಲ್ಲ’ ಅಂತ ಹೇಳುತ್ತಿದ್ದೆನು. ನನ್ನ ಈ ಮಾತುಗಳನ್ನೂ ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ‘ನೋ ಅಂದ್ರೆ ನೋ’ ಎಂಬುದರ ಅರ್ಥವೇ ಅವರಿಗೆ ಆಗುತ್ತಿಲ್ಲವಲ್ಲ ಅಂತ ನನಗೆ ನಿಜವಾಗಿಯೂ ಅಚ್ಚರಿಯಾಗುತ್ತಿತ್ತು. ಯಾಕಂದ್ರೆ ಅವರಿಗೆ ಹೀಗೆ ಕರೆದಾಗ ಯಾರೂ `ನೋ’ ಅಂತ ಹೇಳಿರಲಿಲ್ಲವೋ ಏನೋ, ಅದಕ್ಕೆ ಅವರು ನನ್ನ ನೇರ ಮಾತುಗಳನ್ನು ಕಡೆಗಣಿಸುತ್ತಿದ್ದರು ಅಂತ ಅವರು ತನಗಾದ ಅನುಭವವನ್ನು ಬಿಚ್ಚಿಟ್ಟಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=Pvb9crCfEe4
https://www.youtube.com/watch?v=uw6_G0ZSGlY
https://www.youtube.com/watch?v=b38lBhiL-y8