ಬಾಯ್‌ಫ್ರೆಂಡ್ ಬಗ್ಗೆ ಅನ್‌ರೊಮ್ಯಾಂಟಿಕ್ ಎಂದು ಅಸಮಾಧಾನ ವ್ಯಕ್ತಪಡಿಸಿದ ಶ್ರುತಿ ಹಾಸನ್

Public TV
1 Min Read
shruti haasan

‘ಸಲಾರ್’ (Saalar) ಬ್ಯೂಟಿ ಶ್ರುತಿ ಹಾಸನ್ (Shruti Haasan) ಅವರು ಸೌತ್ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗುತ್ತಾ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಶಾಂತನೂ ಹಜಾರಿಕಾ ಜೊತೆ ಡೇಟ್ ಮಾಡ್ತಿರೋ ಬಗ್ಗೆ ಶ್ರುತಿ ಈಗಾಗಲೇ ರಿವೀಲ್ ಮಾಡಿದ್ದಾರೆ. ಇಬ್ಬರೂ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಆದರೆ ಈ ನಡುವೆ ಬಾಯ್‌ಫ್ರೆಂಡ್ (Boyfriend) ಬಗ್ಗೆ ನಟಿ ದೂರಿದ್ದಾರೆ.

shruti haasan 3

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಪ್ರೀತಿಗೆ ಮನೆಯವರ ಒಪ್ಪಿಗೆ ಕೂಡ ಸಿಕ್ಕಿದೆ. ಹಾಗಾಗಿ ಎಲ್ಲೂ ತಮ್ಮ ಲವ್ (Love) ಬಗ್ಗೆ ನಟಿ ರಿವೀಲ್ ಮಾಡಿದ್ದಾರೆ. ಶಾಂತನೂ- ಶ್ರುತಿ ಸಾಕಷ್ಟು ಸಮಯದಿಂದ ಲವ್ ಮಾಡ್ತಿದ್ದಾರೆ. ಹೀಗಿರುವಾಗ ತನ್ನ ಪಾರ್ಟನರ್ ಅದೆಷ್ಟರ ಮಟ್ಟಿಗೆ ಅನ್‌ರೊಮ್ಯಾಂಟಿಕ್ ಎಂದು ಕಂಪ್ಲೇಟ್‌ವೊಂದನ್ನ ಎಲ್ಲರ ಮುಂದಿಟ್ಟಿದ್ದಾರೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನಿಗೆ ‘ಮುಡಿ’ ಕೊಟ್ಟ ಖ್ಯಾತ ನಟ ಧನುಷ್

shruti haasan 1

ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶಾಂತನು (Shantanu Hazarika) ಜೊತಗಿನ ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಗೆಳೆಯ ಶಾಂತನು ಅವರನ್ನು ಮೋಸ್ಟ್ ಅನ್‌ರೊಮ್ಯಾಂಟಿಕ್ ವ್ಯಕ್ತಿ ಎಂದು ಕರೆದಿದ್ದಾರೆ. ಶ್ರುತಿ ಹಾಸನ್ ಭಾನುವಾರ (ಜುಲೈ 2)ರಂದು  ಹೂವುಗಳನ್ನು ಆರ್ಡರ್ ಮಾಡಿಕೊಂಡಿದ್ದರು. ಇದನ್ನು ಶಾಂತನು ತೆಗೆದುಕೊಂಡಿದ್ದಾರೆ. ಇದಕ್ಕೆ ಶ್ರುತಿ ಹಾಸನ್ ಕೋಪಗೊಂಡಿದ್ದಾರೆ. ನೀನು ಮೋಸ್ಟ್ ಅನ್‌ರೊಮ್ಯಾಂಟಿಕ್ ವ್ಯಕ್ತಿ. ನನಗಾಗಿ ನೀನು ಎಂದಿಗೂ ಹೂವುಗಳನ್ನು ತಂದುಕೊಡಲಿಲ್ಲ. ಅದಕ್ಕಾಗಿಯೇ ನಾನು ಹೂವುಗಳನ್ನು ಆರ್ಡರ್ ಮಾಡಿಕೊಂಡೆ ಎಂದಿದ್ದಾರೆ ಶ್ರುತಿ ಹಾಸನ್. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದಲ್ಲಿ ಶ್ರುತಿ ಹಾಸನ್ ಹೀರೋಯಿನ್ ಆಗಿ ಮಿಂಚಿದ್ದಾರೆ. ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಮೊದಲ ಬಾರಿಗೆ ಪ್ರಭಾಸ್- ಶ್ರುತಿ ಹಾಸನ್ ಜೊತೆಯಾಗಿ ನಟಿಸಿದ್ದಾರೆ. ಹಾಗಾಗಿ ಕೆಜಿಎಫ್ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಕಂಟೆಂಟ್, ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆಯಿದೆ.

Share This Article