ತುಮಕೂರು: ಮೈತ್ರಿ ಸರ್ಕಾರ ಹಾಗೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ನಟಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೃತಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ನಾನು ಚೌಕಿದಾರ್ ಅಭಿಯಾನಕ್ಕೆ ಚಾಲನೆ ಕೊಟ್ಟ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕುರ್ಚಿಗಾಗಿ ಒದ್ದಾಡುತ್ತಿದ್ದಾರೆ. ಅವರು ಮಗನ ಗೆಲುವಿಗಾಗಿ ಮಂಡ್ಯಕ್ಕೆ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಅತಂತ್ರ ಸ್ಥಿತಿ ಇದೆ ಅಂದ್ರು.
Advertisement
Advertisement
ತುಮಕೂರಲ್ಲಿ ಮುದ್ದಹನುಮೇಗೌಡ ನಾಮಪತ್ರ ಹಿಂಪಡೆದಿದ್ದಾರೆ. ಯಾವುದೇ ಕಾರಣಕ್ಕೆ ನಾಮಪತ್ರ ಹಿಂಪಡೆಯಲ್ಲ ಎಂದು ಕಣ್ಣೀರು ಹಾಕಿದ್ದರು. ಇಷ್ಟೆಲ್ಲಾ ಆದ ಮೇಲೂ ಇದೀಗ ಅವರು ನಾಮಪತ್ರ ಯಾಕೆ ವಾಪಸ್ ಪಡೆದ್ರು ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಯಾರದ್ದೋ ದೊಡ್ಡ ಪ್ರಭಾವವಿದೆ ಎಂದು ವಾಗ್ದಾಳಿ ನಡೆಸಿದರು. ಮೈತ್ರಿ ಸರ್ಕಾರ ಬಂದಾಗಿನಿಂದಲೂ ನಾಯಕರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಿ ಎಂದು ಶೃತಿ ಮನವಿ ಮಾಡಿಕೊಂಡರು.
Advertisement
ಮೋದಿಯಿಂದ ಹೆಮ್ಮೆ:
ಇಲ್ಲಿ ಪ್ರತಿಯೊಬ್ಬರೂ ಕಾವಲುದಾರರು. ಮೋದಿಯವರು ನಿಜವಾದ ಚೌಕಿದಾರ. ದೇಶವನ್ನ ಚೌಕಿದಾರ ಕಾಯುತ್ತಿರುವಾಗ ದೇಶದ ಜನರು ಕೂಡಾ ಚೌಕಿದಾರ್ ಅನ್ನುತ್ತಿದ್ದಾರೆ. ನಾನು ಭಾರತೀಯಳು ಅನ್ನುವ ಹೆಮ್ಮೆ ಹಾಗೆ ನಾನು ಬಿಜೆಪಿ ಕಾರ್ಯಕರ್ತೆ ಅನ್ನೋದಕ್ಕೂ ಹೆಮ್ಮೆ ಇದೆ. ಆ ಹೆಮ್ಮೆ ಬಂದಿರೋದೇ ಮೋದಿಯವರಿಂದಾಗಿ ಎಂದು ಹೇಳಿದ್ರು.
Advertisement
ಇಡೀ ವಿಶ್ವದಲ್ಲೇ ಮೋದಿ ಅವರಿಗೆ ಗೌರವ ಸಿಗುತ್ತಿದೆ. ಮಹಿಳಾ ಪರವಾದ ಹಲವು ಕಾರ್ಯಕ್ರಮಗಳನ್ನು ಮೋದಿ ನೀಡಿದ್ದಾರೆ. ನಿರ್ಮಲಾ ಸೀತಾರಾಮನ್‍ಗೆ ದೇಶದ ರಕ್ಷಣಾ ಖಾತೆ ಕೊಟ್ಟು ಮಹಿಳೆಯರ ಪ್ರಾಮುಖ್ಯತೆ ಹೆಚ್ಚಿಸಿದ್ದಾರೆ. ರಾಜ್ಯದಲ್ಲಿ ಬಂದಿರುವ ಅತಂತ್ರ ಸ್ಥಿತಿ ಕೇಂದ್ರದಲ್ಲಿ ಬರಬಾರದು. ಯಾಕಂದ್ರೆ ಇದೀಗ ದೋಸ್ತಿಗಳಲ್ಲಿ ಕುರ್ಚಿಗಾಗಿ ಕಾದಾಟ ನಡೆಯುವುದನ್ನು ನೋಡುತ್ತಿದ್ದೇವೆ. ಕಾಂಗ್ರೆಸ್ ನವರ ಬಳಿ ಕಪ್ಪು ಹಣ ಇರಬಹುದು. ಅದನ್ನೇ ಈಗ ತಿಂಗಳಿಗೆ ವರ್ಷಕ್ಕೆ 72 ಸಾವಿರ ಪ್ರಣಾಳಿಕೆ ಮಾಡಿದ್ದಾರೆ. ಅದೊಂದು ಸುಳ್ಳಿನ ಕಂತೆಯಾಗಿದೆ ಎಂದು ಟಾಂಗ್ ನೀಡಿದ್ರು.