ಕನ್ನಡದ ‘ಕಬ್ಜ’ ಸಿನಿಮಾದ ನಟಿ ಶ್ರೀಯಾ ಶರಣ್ (Shriya Saran) ಅವರು ಹೊಸದೊಂದು ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಬಳುಕುವ ಬಳ್ಳಿಯಂತೆ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ನಟಿಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಲ್ಲಿ ಮಿಂಚುವ ಶ್ರೀಯಾ ಇದೀಗ ಪಡ್ಡೆಹುಡುಗರು ನಿದ್ದೆಗೆಡಿಸುವ ಕೆಲಸ ಮಾಡಿದ್ದಾರೆ. ಕಲರ್‌ಫುಲ್ ಡ್ರೆಸ್ ಧರಿಸಿ ನಟಿ ಮುದ್ದಾಗಿ ಕಾಣಿಸಿಕೊಂಡು ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಖ್ಯಾತ ಗಾಯಕ ಹಿಮೇಶ್ ರೇಶಮಿಯಾಗೆ ಪಿತೃ ವಿಯೋಗ
42ರ ಹರೆಯದಲ್ಲೂ ನಟಿಯ ಫಿಟ್‌ನೆಸ್ & ಬ್ಯೂಟಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಶೈನಿಂಗ್ ಡ್ರೆಸ್‌ನಲ್ಲಿ ಮಿಂಚಿರುವ ಶ್ರೀಯಾ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ- ತಂದೆಯಾದ ಖುಷಿಯಲ್ಲಿ ಚಂದನ್
ಇನ್ನೂ ಕನ್ನಡದ ‘ಚಂದ್ರ’ (Chandra) ಚಿತ್ರದ ಮೂಲಕ ಬಹುಭಾಷಾ ನಟಿ ಶ್ರೀಯಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ನೆನಪಿರಲಿ ಪ್ರೇಮ್‌ಗೆ ನಾಯಕಿಯಾಗಿ ನಟಿಸಿದರು. ಈ ಚಿತ್ರಕ್ಕೆ ರೂಪ ಅಯ್ಯರ್ ನಿರ್ದೇಶನ ಮಾಡಿದ್ದರು.
‘ಕಬ್ಜ’ ಸಿನಿಮಾದಲ್ಲಿ ಉಪೇಂದ್ರ(Upendra), ಸುದೀಪ್, ಶಿವರಾಜ್‌ಕುಮಾರ್ ಜೊತೆ ಶ್ರೀಯಾ ನಟಿಸಿದರು. ಉಪೇಂದ್ರಗೆ ಶ್ರೀಯಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವನ್ನು ಆರ್.ಚಂದ್ರು ನಿರ್ದೇಶನ ಮಾಡಿದ್ದರು. ‘ಕಬ್ಜ 2’ (Kabzaa 2) ಕೂಡ ಬರಲಿದೆ. ಆದರೆ ಅದ್ಯಾವಾಗಿನಿಂದ ಶೂಟಿಂಗ್ ಶುರು ಎಂಬುದನ್ನು ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಬೇಕಿದೆ.
View this post on Instagram
ಅಂದಹಾಗೆ, 2018ರಲ್ಲಿ ಆಂಡ್ರೇ ಕೊಸ್ಚೆವ್ ಜೊತೆ ಶ್ರೀಯಾ ಮದುವೆಯಾದರು. 2021ರಲ್ಲಿ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದರು. ರಾಧಾ ಎಂಬ ಮುದ್ದಾದ ಮಗಳ ಆರೈಕೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಿನಿಮಾ ಕೂಡ ಮಾಡುತ್ತಿದ್ದಾರೆ.