‘ಸ್ತ್ರೀ 2′ (Stree 2) ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ಶ್ರದ್ಧಾ ಕಪೂರ್‌ಗೆ (Shraddha Kapoor) ಬೇಡಿಕೆ ಹೆಚ್ಚಾಗಿದೆ. ಹಾಗಂತ ಬಂದ ಸಿನಿಮಾ ಆಫರ್ಸ್‌ಗಳನ್ನು ಅವರು ಒಪ್ಪಿಕೊಳ್ತಿಲ್ಲ. ಹೀಗಿರುವಾಗ ‘ವಾರ್ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಸೆಟ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಬಾಲಿವುಡ್ ನಟಿ
ಶ್ರದ್ಧಾ ಕಪೂರ್ ಅವರು ‘ಸ್ತ್ರೀ 2’ ಸಿನಿಮಾ ಮೂಲಕ ಸಕ್ಸಸ್ ಕಂಡ ಮೇಲೆ ನಾಯಕಿಯಾಗಿ ಮತ್ತು ಸ್ಪೆಷಲ್ ಹಾಡುಗಳಿಗೆ ಹೆಜ್ಜೆ ಹಾಕಲು ಬುಲಾವ್ ಬರುತ್ತಿದೆ. ಈ ಹಿಂದೆ ‘ಪುಷ್ಪ 2’ಗೆ ನಟಿಯನ್ನು ಕೇಳಲಾಗಿತ್ತು. ಆದರೆ ಸಂಭಾವನೆ ವಿಚಾರದಲ್ಲಿ ಹೊಂದಾಣಿಕೆ ಆಗದೇ ಇದ್ದಿದ್ದಕ್ಕೆ ಅವರನ್ನು ಕೈಬಿಡಲಾಯಿತು ಎಂಬ ಸುದ್ದಿ ಹರಿದಾಡಿತ್ತು. ಇದೀಗ ‘ವಾರ್ 2’ (War 2) ಚಿತ್ರದಲ್ಲಿ ಶ್ರದ್ಧಾ ಹೆಸರು ಸದ್ದು ಮಾಡುತ್ತಿದೆ.
ಜ್ಯೂ.ಎನ್‌ಟಿಆರ್, ಹೃತಿಕ್ ರೋಷನ್ (Hrithik Roshan) ಜೊತೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಶ್ರದ್ಧಾರನ್ನು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ನಟಿ ಗ್ರೀನ್ ಸಿಗ್ನಲ್ ಕೊಟ್ರಾ? ಚಿತ್ರತಂಡದ ಭಾಗವಾಗ್ತಿದ್ದಾರಾ? ಎಂಬುದು ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.