Connect with us

Cinema

ಫೋಟೋಶೂಟ್ ವೇಳೆ ಗಾಳಿಗೆ ಹಾರಿದ ಶಿಲ್ಪಾ ಶೆಟ್ಟಿ ಡ್ರೆಸ್ – ವಿಡಿಯೋ ನೋಡಿ

Published

on

ನವದೆಹಲಿ: ನಟಿಯರ ಉಡುಗೆ-ತೊಡುಗೆ ಟ್ರೋಲ್ ಆಗುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಬಾಲಿವುಡ್ ಬೆಡಗಿ ನಟಿ ಶಿಲ್ಪಾ ಶೆಟ್ಟಿ ಹಾಲಿವುಡ್ ನಟಿಯಂತೆ ಫೋಸ್ ಕೊಡಲು ಹೋಗಿ ಟ್ರೋಲ್ ಆಗಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಅವರು ಹೊರಾಂಗಣದಲ್ಲಿ ಫೋಟೋ ಶೂಟ್ ಮಾಡಿಸುವಾಗ ಗಾಳಿಗೆ ಅವರ ಡ್ರೆಸ್ ಹಾರಿದೆ. ಆ ವಿಡಿಯೋದನ್ನು ಶಿಲ್ಪಾ ಅವರು ಇನ್ಸ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಟಿ ಶಿಲ್ಪಾ ಅವರು ‘ಕ್ರೂಸ್’ನ ಹೊರಾಂಗಣದಲ್ಲಿ ಫೋಟೋ ಶೂಟ್ ಮಾಡಿಸುತ್ತಿದ್ದರು. ಆಗ ಖ್ಯಾತ ಬಾಲಿವುಡ್ ನಟಿ ‘ಮರ್ಲಿನ್ ಮನ್ರೋ’ ರೀತಿ ಫೋಸ್ ಕೊಡುತ್ತಿದ್ದರು. ಈ ವೇಳೆ ಗಾಳಿ ಜೋರಾಗಿ ಬೀಸಿದೆ. ಇದರಿಂದ ಅವರ ಡ್ರೆಸ್ ಗಾಳಿಗೆ ಹಾರಿದೆ. ತಕ್ಷಣ ಶಿಲ್ಪಾ ಶೆಟ್ಟಿ ಅವರು ಡ್ರೆಸ್ ಸರಿಪಡಿಸಿಕೊಂಡು ನಕ್ಕಿದ್ದಾರೆ. ಈ ವಿಡಿಯೋವನ್ನು ಶಿಲ್ಪಾ ಶೆಟ್ಟಿ ಅವರು ಇನ್ಸ್ ಸ್ಟಾಗ್ರಾಂಗೆ ಪೋಸ್ಟ್ ಮಾಡಿದ್ದು, ಜೊತೆಗೆ ನನ್ನ ‘ಮರ್ಲಿನ್ ಮನ್ರೋ’ ಕ್ಷಣ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ.

ಫೋಟೋಶೂಟ್ ವೇಳೆ ಜಾಗರೂಕರಾಗಿರಬೇಕು. ವಿಡಿಯೋವನ್ನು ಕೊನೆಯವರೆಗೂ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಇತರರು ಫೋಟೋಶೂಟ್ ವೇಳೆ ಜಾಗೃತೆಯಿಂದ ಇರಬೇಕು ಎಂದು ತಿಳಿಸಿದ್ದಾರೆ. ಈಗಾಗಲೇ ಈ ವಿಡಿಯೋ 21 ಲಕ್ಷಕ್ಕಿಂತ ಅಧಿಕ ವೀವ್ಸ್ ಆಗಿದೆ. ಸಾವಿರಾರು ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ಸ್ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *