ಸಲ್ಲದ ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುತ್ತಾರೆ ನಟಿಯರಾದ ರಾಖಿ ಸಾವಂತ್ (Rakhi Sawant) ಮತ್ತು ಶೆರ್ಲಿನ್ ಚೋಪ್ರಾ (Sherlina Chopra). ಮದುವೆ, ಬಾಯ್ ಫ್ರೆಂಡ್, ಬ್ರೇಕಪ್ ಎನ್ನುತ್ತಾ ದಿನಕ್ಕೊಂದು ಸದ್ದು ಮಾಡುವ ಚಾಳಿ ರಾಖಿಗಿದ್ದರೆ, ಮೀಟೂ ಕಾರಣದಿಂದಾಗಿ ಶೆರ್ಲಿನ್ ಚೋಪ್ರಾ ಇತ್ತೀಚೆಗಂತೂ ಸಾಕಷ್ಟು ಸುದ್ದಿ ಆಗುತ್ತಿದ್ದಾಳೆ. ಈ ಇಬ್ಬರ ನಡುವೆ ಯಾವತ್ತೂ ಕೋಲ್ಡ್ ವಾರ್ ಇದ್ದೇ ಇದೆ. ಇದು ಮತ್ತೊಮ್ಮೆ ಸಾಬೀತಾಗಿದೆ.
Advertisement
ಮಾಧ್ಯಮಗಳ ಜೊತೆ ಮಾತನಾಡಿರುವ ಶೆರ್ಲಿನ್ ಚೋಪ್ರಾ, ಖಡಕ್ಕಾಗಿಯೇ ರಾಖಿಗೆ ಸಂದೇಶವೊಂದನ್ನು ನೀಡಿದ್ದಾರೆ. ರಾಖಿ ನಾನ್ ಸೆನ್ಸ್ ಎಂದು ಮೂದಲಿಸಿದ್ದಾರೆ. ರಾಖಿ ಮೂರ್ನಾಲ್ಕು ತಿಂಗಳಿಗೊಮ್ಮೆ ಬಾಯ್ ಫ್ರೆಂಡ್ ಬದಲಾಯಿಸುತ್ತಾಳೆ. ಗಂಡನನ್ನೂ ಬದಲಾಯಿಸುತ್ತಾಳೆ. ಆಕೆ ಡುಮ್ಮಿ (Dummy). ಜಿಮ್ ಮುಂದೆ ಓಡಾಡುತ್ತಾಳೆಯೇ ಹೊರತು, ಜಿಮ್ ನಲ್ಲಿ ಕಷ್ಟ ಪಡಲ್ಲ ಎಂದು ಕಾಮೆಂಟ್ ಮಾಡಿದ್ದಾಳೆ. ಇದನ್ನೂ ಓದಿ:ಅಮಿತಾಭ್ ಮೊಮ್ಮಗಳ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಟ ಸಿದ್ಧಾಂತ್
Advertisement
Advertisement
ರಾಖಿ ಮೇಲೆ ಶೆರ್ಲಿನ್ ಕೋಪ ಮಾಡಿಕೊಳ್ಳಲು ಕಾರಣ ಸಾಜಿದ್ (Sajid) ಮೇಲೆ ರಾಖಿ ತೋರಿಸಿದ ಅನುಕಂಪ. ಹಿಂದಿ ಬಿಗ್ ಬಾಸ್ (Bigg Boss) ಮನೆಯಲ್ಲಿ ಸದ್ಯ ನಿರ್ದೇಶಕ ಸಾಜಿದ್ ಇದ್ದಾನೆ. ಅವನ ಮೇಲೆ ಶೆರ್ಲಿನ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಸಾಜಿದ್ ನನ್ನು ಮನೆಯಿಂದ ಆಚೆ ಹಾಕಿ ಎಂದು ಗುಡುಗಿದ್ದಳು. ಅವನೊಬ್ಬ ಅವಿವೇಕಿ ಎಂದೂ ಜರಿದಿದ್ದರು. ಈ ಮಾತಿಗೆ ಸಾಜಿದ್ ಮೇಲೆ ರಾಕಿ ಅನುಕಂಪ ತೋರಿದ್ದರು. ಸಾಜಿದ್ ನನ್ನು ಬಿಟ್ಟುಬಿಡಿ ಎಂದು ಹೇಳಿದ್ದರು.
Advertisement
ಸಾಜಿದ್ ಪರ ರಾಖಿ ಸಾವಂತ್ ಬ್ಯಾಟಿಂಗ್ ಮಾಡಿದಳು ಎನ್ನುವ ಕಾರಣಕ್ಕಾಗಿ ಶೆರ್ಲಿನ್ ಇದೀಗ ತಿರುಗಿ ಬಿದ್ದಿದ್ದಾಳೆ. ರಾಖಿ ದೇಹ ಬೆಳೆಸಿದ್ದಾಳೆ. ಅದನ್ನು ಕರಗಿಸಬೇಕು ಅಂತ ಜಿಮ್ ಮುಂದೆ ತಿರುಗುತ್ತಾಳೆ. ಜಿಮ್ ಒಳಗೆ ಹೋಗಬೇಕು, ಮೆಂಬರ್ ಶಿಪ್ ತಗೆದುಕೊಳ್ಳಬೇಕು, ಕಷ್ಟ ಪಡಬೇಕು. ಆಕೆಗೆ ಕಷ್ಟ ಪಡೋದು ಏನು ಅಂತಾನೇ ಗೊತ್ತಿಲ್ಲ ಎಂದು ಕಾಲೆಳೆದಿದ್ದಾಳೆ.