ನಿರ್ಮಾಪಕರೊಬ್ಬರ ಮೇಲೆ ನಟಿ ಶೀತಲ್ (Sheetal) ಗಂಭೀರ ಆರೋಪ ಮಾಡಿದ್ದಾರೆ. ನಿರ್ಮಾಪಕನ ಜೊತೆ ಮಂಚ ಹಂಚಿಕೊಂಡಿದ್ದರ ಪರಿಣಾಮ, ಇಂದು ತಮಗೆ ಕಣ್ಣೀರಿಡುವಂತಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಆ ನಿರ್ಮಾಪಕನ ವಿರುದ್ಧ ಪೊಲೀಸರಿಗೆ ದೂರು ಕೂಡ ಅವರು ನೀಡಿದ್ದಾರೆ.
ಒಡಿಶಾ ಚಿತ್ರೋದ್ಯಮದಲ್ಲಿ ನಟಿ ಶೀತಲ್ ಅವರಿಗೆ ತಮ್ಮದೇ ಆದ ಹೆಸರಿದೆ. ದಯಾನಿಧಿ ಎಂಟರ್ ಟೇನ್ಮೆಂಟ್ ಮಾಲೀಕ ಹಾಗೂ ನಿರ್ಮಾಪಕ ದಯಾನಿಧಿ ದಹಿಮಾ (Dayanidhi Dahima) ಅವರೊಂದಿಗೆ ನಟಿ ಶೀತಲ್ ಸಂಬಂಧದಲ್ಲಿ ಇದ್ದಳಂತೆ. ದಯಾನಿಧಿ ಬ್ಯಾನರ್ ನಲ್ಲಿ ಮೂಡಿ ಬಂದ ಹಲವು ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ. ಇದನ್ನೂ ಓದಿ:‘ಸಲಾರ್’ ಚಿತ್ರಕ್ಕೆ ಹಿನ್ನೆಲೆ ಸಂಗೀತ : ಬಸ್ರೂರಿನಲ್ಲಿ ಬೀಡುಬಿಟ್ಟ ಪ್ರಶಾಂತ್ ನೀಲ್
ದಯಾನಿಧಿ ಜೊತೆ ಸರಸ ಸಲ್ಲಾಪದ ಕ್ಷಣಗಳನ್ನು ನಟಿಯ ಅರಿವಿಗೆ ಬಾರದಂತೆ ಸೆರೆ ಹಿಡಿಯಲಾಗಿದೆಯಂತೆ. ಆ ವಿಡಿಯೋ (video) ಮತ್ತು ಫೋಟೋಗಳನ್ನು (private photo) ಇಟ್ಟುಕೊಂಡು ದಯಾನಿಧಿ ತಮಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ನಟಿ ಆರೋಪಿಸಿದ್ದಾಳೆ. ತನಗೆ ಮಾತ್ರವಲ್ಲ ತನ್ನ ತಾಯಿ ತಮ್ಮ ತಮ್ಮನಿಗೂ ತೊಂದರೆ ಕೊಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈವರೆಗೂ ತಾನು ಪಡೆದಿರುವ ಸಂಭಾವನೆಯನ್ನು ದಯಾನಿಧಿ ವಾಪಸ್ಸು ಕೇಳುತ್ತಿದ್ದಾನೆ ಎನ್ನುವುದು ಶೀತಲ್ ಆರೋಪ. ಅಷ್ಟೇ ಅಲ್ಲದೇ ಇತ್ತೀಚೆಗಷ್ಟೇ ತನ್ನೊಂದಿಗೆ ದಯಾನಿಧಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]