ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ್ (Shanvi Srivastav) ನಟನೆಯ ಹೊಸ ಸಿನಿಮಾ ಅನೌನ್ಸ್ ಆಗಿದೆ. ಕನ್ನಡದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekar) ಅವರ ಮುಂಬರುವ ಸಿನಿಮಾಗೆ ಮಾಸ್ಟರ್‌ಪೀಸ್ ಬೆಡಗಿ ಶಾನ್ವಿ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.
ಕನ್ನಡದ ಜೊತೆ ಪರಭಾಷೆಗಳಲ್ಲಿ ನಟಿಸುತ್ತ ಬ್ಯುಸಿಯಿರುವ ನಟಿ ಶಾನ್ವಿ ಶ್ರೀವಾಸ್ತವ್ ಇದೀಗ ಕನ್ನಡದ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. `ಅಮೆರಿಕ ಅಮೆರಿಕ’ ಚಿತ್ರ ಸೇರಿದಂತೆ ಹಲವು ಚಿತ್ರಗಳಿಗೆ ನಿರ್ದೇಶನ ಮಾಡಿರುವ ಮಹಾನ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಇದೀಗ ಶಾನ್ವಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಶಾನ್ವಿ ನಟನೆಯ ಈ ಹೊಸ ಸಿನಿಮಾ ಫೆಬ್ರವರಿಯಿಂದ ಶುರುವಾಗಲಿದೆ. 60% ರಷ್ಟು ಚಿತ್ರೀಕರಣ ಅಮೆರಿಕದಲ್ಲಿ ನಡೆಯಲಿದೆ. ಮಹಿಳಾ ಪ್ರಧಾನ ಸಿನಿಮಾದಲ್ಲಿ `ಮಾಸ್ಟರ್‌ಪೀಸ್’ ನಟಿ ನಟಿಸುತ್ತಿದ್ದಾರೆ. ಅವರ ಪಾತ್ರವೇ ಪ್ರಧಾನವಾಗಿರಲಿದೆ. ಚಿತ್ರಕ್ಕೆ ಮನೋಮೂರ್ತಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ: `ಕಾಂತಾರ’ ಸಕ್ಸಸ್: ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ
ಇನ್ನೂ ಕನ್ನಡದ `ಉಗ್ರಂ’ (Ugram) ಸಿನಿಮಾ ಮರಾಠಿಗೆ ರಿಮೇಕ್ ಆಗಲಿದ್ದು, ಇದರಲ್ಲಿ ಶಾನ್ವಿ ನಾಯಕಿಯಾಗಿ ನಟಿಸಲಿದ್ದಾರೆ. ಜೊತೆಗೆ ಮಲಯಾಳಂ ಚಿತ್ರರಂಗದಲ್ಲೂ ನಟಿ ಬ್ಯುಸಿಯಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k