`ಕಾಂತಾರ’ ಬೆಡಗಿ ಸಪ್ತಮಿ ಗೌಡ (Saptami Gowda) ಸದ್ಯ ಚಿತ್ರರಂಗದಲ್ಲಿ ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿಯೂ ಕೂಡ ಸದ್ದು ಮಾಡ್ತಿದ್ದಾರೆ. ಈಗ ತಮ್ಮ ಹೊಸ ಬಗೆಯ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ.
ರಿಷಬ್ ಶೆಟ್ಟಿಗೆ (Rishab Shetty) ನಾಯಕಿಯಾಗಿದ್ದ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚ್ತಿದ್ದಾರೆ. ಸಿನಿಮಾ, ಜಾಹೀರಾತು, ಉದ್ಘಾಟನೆ ಸಮಾರಂಭಗಳಿಗೆ ಈ ನಟಿನೇ ಬೇಕು ಅನ್ನುವಷ್ಟರ ಮಟ್ಟಿಗೆ ಡಿಮ್ಯಾಂಡ್ ಕ್ರಿಯೆಟ್ ಮಾಡಿದ್ದಾರೆ. ಇದನ್ನೂ ಓದಿ: ಜೋರ್ಡನ್ ಪ್ರವಾಸದಲ್ಲಿ ಕಾರುಣ್ಯ : ಮೃತಸಮುದ್ರ ದಂಡೆ ಮೇಲೆ ಬಿಂದಾಸ್ ಪೋಸ್
View this post on Instagram
ಕಪ್ಪು ಬಣ್ಣದ ಮಾಡ್ರನ್ ಟಾಪ್‌ನಲ್ಲಿ ಸಖತ್ ಹಾಟ್ ಆಗಿ ಮೂಗುತಿ ಸುಂದರಿ ಸಪ್ತಮಿ ಕಾಣಿಸಿಕೊಂಡಿದ್ದಾರೆ. ನಟಿಯ ಹೊಸ ಅವತಾರ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ನಟಿ ಶೇರ್ ಮಾಡಿರುವ ಹೊಸ ಫೋಟೋಶೂಟ್‌ಗೆ (Photoshoot) ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಪ್ತಮಿ ಗೌಡ, ಬಾಲಿವುಡ್‌ನ (Bollywood) `ದಿ ವ್ಯಾಕ್ಸಿನ್ ವಾರ್’, ಡಾಲಿ- ರಮ್ಯಾ ಜೊತೆಗಿನ ಚಿತ್ರ, ಯುವ ರಾಜ್‌ಕುಮಾರ್ ಜೊತೆ `ಯುವ’ (Yuva) ಚಿತ್ರ ಸೇರಿದಂತೆ ಹಲವರು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.