ರಮ್ಯಾಗಿಂತ ಸಾನ್ಯಗೆ ವಯಸ್ಸಾಯ್ತಾ? ಕಾಲೆಳೆದ ನೆಟ್ಟಿಗರು

Public TV
1 Min Read
sanya iyer

ಬಿಗ್ ಬಾಸ್ ಶೋನಿಂದ (Bigg Boss Kannada) ಗಮನ ಸೆಳೆದ ನಟಿ ಸಾನ್ಯ ಅಯ್ಯರ್ (Sanya Iyer) ಸಿನಿಮಾಗಳ ಮೂಲಕ ಸೌಂಡ್ ಮಾಡುವ ಬದಲು ಸದಾ ಒಂದಲ್ಲಾ ಒಂದು ಕಿರಿಕ್ ಮಾಡಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ದಾರೆ. ಇದೀಗ ಕೆಸಿಸಿ ಇವೆಂಟ್‌ನಲ್ಲಿ ಸಾನ್ಯ, ನಟಿ ರಮ್ಯಾ ಅವರನ್ನ ಭೇಟಿಯಾಗಿರುವ ಫೋಟೋವನ್ನ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ನೀವೇ ವಯಸ್ಸಾದಂಗೆ ಕಾಣ್ತಿದ್ದೀರಾ ಎಂದು ನೆಟ್ಟಿಗರು ಸಾನ್ಯ ಕಾಲೆಳೆದಿದ್ದಾರೆ.

sanya iyer 5

ಮೋಹಕತಾರೆ ರಮ್ಯಾ (Actress Ramya) ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿದ್ದಾರೆ. ಸಿನಿಮಾ ಮತ್ತು ಕ್ರಿಕೆಟ್‌ಗೆ ಸಂಬಂಧಿಸಿದ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಆಕ್ಟೀವ್ ಆಗಿದ್ದಾರೆ. ಇದೀಗ ಕೆಸಿಸಿ (KCC) ಕ್ರಿಕೆಟ್ ಲೀಗ್‌ನಲ್ಲಿ ರಮ್ಯಾ ಸಾಥ್ ನೀಡಿದ್ದಾರೆ. ಈ ವೇಳೆ ಮೋಹಕತಾರೆ ರಮ್ಯಾ ಜೊತೆಗಿನ ಫೋಟೋವನ್ನ ನಟಿ ಸಾನ್ಯ ಅಯ್ಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರೆಡ್ ಗೌನ್ ಧರಿಸಿ ಪಡ್ಡೆಗಳ ನಿದ್ದೆಗೆಡಿಸಿದ ನವವಧು ಕಿಯಾರಾ

RAMYA 1 1

ಸಾನ್ಯ ಅಯ್ಯರ್ ಜೀನ್ಸ್ ಮತ್ತು ಬಿಳಿ ಬಣ್ಣದ ಟಾಪ್ ಧರಿಸಿದ್ದರೆ, ರಮ್ಯಾ ಅವರು ಬ್ಲ್ಯಾಕ್ ಡ್ರೆಸ್ ಮೇಲೆ ವೈಟ್ ಬ್ಲೇಝರ್ ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಂಬಳದ (Kambala) ಕಿರಿಕ್ ನಂತರ ಮತ್ತೆ ಸಾನ್ಯ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದ್ದಾರೆ. ರಮ್ಯಾ ಜೊತೆಗಿನ ಫೋಟೋವನ್ನ ಸಾನ್ಯ ಶೇರ್ ಮಾಡ್ತಿದ್ದಂತೆ ನಿಮಗೆ 21, ರಮ್ಯಾಗೆ 40, ನಿಮಗಿಂತ ಅವರಿಗೆ ಡಬಲ್ ವಯಸ್ಸಾಗಿದೆ. ಆದರೆ ನೀವೇ ವಯಸ್ಸಾಗಿರುವ ಹಾಗೇ ಕಾಣುತ್ತೀರಾ ಎಂದು ನೆಟ್ಟಿಗರು ಸಾನ್ಯ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ರಮ್ಯಾ ಅವರ ಸೌಂದರ್ಯವನ್ನ ನೆಟ್ಟಿಗರು ಹಾಡಿ ಹೊಗಳಿದ್ದಾರೆ.

Share This Article