ಕನ್ನಡದ ‘ಗಂಡ ಹೆಂಡತಿ’ (Ganda Hendti) ಸಿನಿಮಾ ಮೂಲಕ ಪರಿಚಿತರಾದ ನಟಿ ಸಂಜನಾ ಗಲ್ರಾನಿ (Sanjana Galrani) ಅವರು ಬಕ್ರೀದ್ (Bakrid) ಹಬ್ಬವನ್ನ ಖುಷಿ, ಸಂಭ್ರಮದಿAದ ಆಚರಿಸಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಸಂಜನಾ ಮಾಡೆಲ್ ಆಗಿ ಮೊದಲು ಬಣ್ಣ ಹಚ್ಚಿದ್ರು. ಬಳಿಕ ಸ್ಯಾಂಡಲ್ವುಡ್ಗೆ ತಿಲಕ್ಗೆ ನಾಯಕಿಯಾಗಿ ‘ಗಂಡ ಹೆಂಡತಿ’ ಚಿತ್ರಕ್ಕೆ ಎಂಟ್ರಿ ಕೊಟ್ಟರು. ಮೊದಲ ಚಿತ್ರದಲ್ಲೇ ಭರವಸೆಯ ನಟಿಯಾಗಿ ಗಮನ ಸೆಳೆದರು. ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ಬಿಗ್ ಬಾಸ್ ಮನೆಗೆ ಸಂಜನಾ ಕಾಲಿಟ್ಟಿದ್ದರು. ಈ ಶೋನಲ್ಲೂ ಗಟ್ಟಿ ಸ್ಪರ್ಧಿಯಾಗಿ ಸಂಜನಾ ಕಾಣಿಸಿಕೊಂಡಿದ್ದರು.
2020ರಲ್ಲಿ ಡ್ರಗ್ಸ್ ವಿಚಾರದಲ್ಲಿನ ಕಹಿ ಘಟನೆ ಮರೆತು, ಈಗ ಪತಿ ಅಜೀಜ್ ಪಾಷಾ ಜೊತೆ ಮದುವೆಯಾಗಿ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಇಸ್ಲಾಂ ಧರ್ಮ ಪದ್ಧತಿಯನ್ನ ಅರಿತು ಸಂಜನಾ ಅನುಸರಿಸುತ್ತಿದ್ದಾರೆ. ಸದ್ಯ ಬಕ್ರೀದ್ ಹಬ್ಬದ ಸಂಭ್ರಮದ ಖುಷಿಯಲ್ಲಿದ್ದಾರೆ. ಅತ್ತೆ ಮನೆಯಲ್ಲಿ ಬಕ್ರೀದ್ ಹಬ್ಬ ಆಚರಿಸಿದ್ದರ ಬಗ್ಗೆ ನಟಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಶಾನುಭೋಗರ ಮಗಳಾದ ನಟ ಪ್ರಜ್ವಲ್ ಪತ್ನಿ ರಾಗಿಣಿ ಪ್ರಜ್ವಲ್
ಇತ್ತೀಚಿಗೆ ಸಂಜನಾ ಮೆಕ್ಕಾ, ಮದೀನಾಗೆ ತೆರಳಿದ್ದರು. ಈಗ ಸಂಭ್ರದಿಂದ ಹಬ್ಬ ಆಚರಿಸಿದ್ದಾರೆ. ಎಲ್ಲರಿಗೂ ಬಕ್ರೀದ್ ಹಬ್ಬಕ್ಕೆ ಶುಭಾಶಯ ಕೂಡ ತಿಳಿಸಿದ್ದಾರೆ. ಈ ಕುರಿತ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಮಲಯಾಳಂ ಚಿತ್ರವೊಂದರ ಕಥೆ ಕೇಳಿ ನಟಿಸಲು ಸಂಜನಾ ಓಕೆ ಎಂದಿದ್ದಾರೆ. ಮಾಲಿವುಡ್ ನಟ ಶ್ರೀನಾಥ್ ಬಸಿ ನಾಯಕನಾಗಿರುವ ಈ ಚಿತ್ರಕ್ಕೆ ವಿಜಯ್ ಕುಮಾರ್ ನಿರ್ದೇಶನ ಮಾಡ್ತಿದ್ದಾರೆ. ಸಿನಿಮಾದಲ್ಲಿ ಸಂಜನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೆಲ ದಿನಗಳ ಹಿಂದೆ ಮಗು ಅಲಾರಿಕ್ ಜೊತೆ ಸಂಜನಾ ಅವರು ಶೂಟಿಂಗ್ಗಾಗಿ ಪ್ರಯಾಣ ಮಾಡಿದ್ದು, ನನ್ನ ತಾಯಿಯ ಬೆಂಬಲದಿಂದಲೇ ಸಾಧ್ಯವಾಯಿತು ಎಂದು ನಟಿ ತಿಳಿಸಿದ್ದರು. ದಂಡುಪಾಳ್ಯ-2 ಬಳಿಕ ಮೋಹನ್ ಲಾಲ್ ನಟನೆಯ ಆರಟ್ಟು ಮತ್ತು ಚೋರನ್ ಸಿನಿಮಾದಲ್ಲಿ ಕಡೆಯದಾಗಿ ಸಂಜನಾ ನಟಿಸಿದ್ದರು. ಇದೀಗ ಮಾಲಿವುಡ್ನ ಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ನಟನೆಯತ್ತ ಮುಖ ಮಾಡಿದ್ದಾರೆ.