`777 ಚಾರ್ಲಿ’ (777 Charlie), `ಲಕ್ಕಿಮ್ಯಾನ್’ (Luckyman) ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸಂಗೀತಾ ಶೃಂಗೇರಿ ಇದೀಗ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಸ್ಪೆಷಲ್ ಶೂಟ್ ಮಾಡಿಸಿದ್ದಾರೆ. ನಟಿಯ ನ್ಯೂ ಲುಕ್ ನೆಟ್ಟಿಗರ ಗಮನ ಸೆಳೆದಿದೆ.
View this post on Instagram
`ಹರಹರ ಮಹಾದೇವ’ (Harahara Mahadev) ಸೀರಿಯಲ್ ಮೂಲಕ ಮನೆ ಮಾತಾದ ನಟಿ ಸಂಗೀತಾ (Sangeetha Sringeri) ಇತ್ತೀಚೆಗೆ ರಕ್ಷಿತ್ ಶೆಟ್ಟಿ ಮತ್ತು ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗುವ ಮೂಲಕ ಚಿತ್ರರಂಗದಲ್ಲಿ ಗಮನ ಸೆಳೆದಿದ್ದರು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ನಟಿ ಸಂಗೀತಾ ಸ್ಪೆಷಲ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ: ಕನ್ನಡಿ ವಿಚಾರಕ್ಕೆ ರೂಪೇಶ್ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್
View this post on Instagram
ಕ್ರಿಸ್‌ಮಸ್ ಹಬ್ಬದಂದು(Christmas Festval) ಭಿನ್ನವಾಗಿ ನಟಿ ಸಂಗೀತಾ ಕಾಣಿಸಿಕೊಂಡಿದ್ದಾರೆ. ವೈಟ್, ರೆಡ್ ಮತ್ತು ಗ್ರೀನ್ ಕಲರ್ ಕಾಂಬಿನೇಷನ್ ಡ್ರೆಸ್‌ನಲ್ಲಿ ಲಕ್ಕಿಮ್ಯಾನ್ ಸುಂದರಿ ಮಿಂಚಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸುಂದರವಾಗಿ ನಟಿ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಕ್ರಿಸ್‌ಮಸ್ ಶುಭಾಶಯಗಳನ್ನ ತಿಳಿಸಿದ್ದಾರೆ. ನಟಿಯ ನ್ಯೂ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.