ಸ್ಯಾಂಡಲ್‌ವುಡ್ (Sandalwood) ನಟಿ ಸಂಗೀತಾ ಭಟ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಎರಡನೇ ಸಲ (Eradane Sala Actress) ನಾಯಕಿ ಸಂಗೀತಾ ಈಗ ಮೂಗು ಚುಚ್ಚಿಸಿಕೊಂಡಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪತ್ನಿಯ ಹೊಸ ಲುಕ್ ನಟ ಸುದರ್ಶನ್ ಅಲಿಯಾಸ್ ತಾಂಡವ್ ಸೂರ್ಯವಂಶಿ ಏನಂದ್ರು ಗೊತ್ತಾ.?
ಚಂದ್ರಚಕೋರಿ, ಭಾಗ್ಯವಂತರು, ಚಂದ್ರಮುಖಿ ಸೇರಿದಂತೆ ಸಾಕಷ್ಟು ಸೀರಿಯಲ್‌ನಲ್ಲಿ ನಟಿಸಿರುವ ಪ್ರತಿಭಾನ್ವಿತ ನಟಿ ಸಂಗೀತಾ ಭಟ್ ತಮಿಳಿನ ಸಿನಿಮಾವೊಂದರ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ರು. ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ಎರಡನೇ ಸಲ, ದಯವಿಟ್ಟು ಗಮನಿಸಿ, ಸೇರಿದಂತೆ ಹಲವು ಚಿತ್ರಗಳಲ್ಲಿ ಸಂಗೀತಾ ಲೀಡ್ ನಾಯಕಿಯಾಗಿ ನಟಿಸಿದ್ದಾರೆ. ಅದರಲ್ಲೂ ಡಾಲಿಗೆ ನಾಯಕಿಯಾದ ಎರಡನೇ ಸಲ ಚಿತ್ರದಲ್ಲಿನ ಸಂಗೀತಾ ನಟನೆ ಎಲ್ಲರ ಗಮನ ಸೆಳೆದಿತ್ತು. ಇದನ್ನೂ ಓದಿ:ಚಿಟ್ಟೆಯಂತೆ ಮಿಂಚಿದ ಸಂತೂರ್ ಮಮ್ಮಿ ಪ್ರಣಿತಾ ಸುಭಾಷ್
ಸುದರ್ಶನ್ ಜೊತೆ ಸಂಗೀತಾ ಭಟ್ (Sangeetha Bhat) ಮದುವೆಯ (Wedding) ಬಳಿಕ ನಟನೆಯಿಂದ ದೂರ ಸರಿದರು. ಈಗ ಮತ್ತೆ ‘ಕ್ಲಾಂತ’ (Klaantha) ಸಿನಿಮಾದ ಮೂಲಕ ನಟಿ ಸೆಕೆಂಡ್ ಇನಿಂಗ್ಸ್ ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ ಸಂಗೀತಾ ಭಟ್ ನಾಯಕಿಯಾಗಿ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಎಂದೂ ಕಾಣಿಸಿಕೊಂಡಿರದ ಪಾತ್ರಕ್ಕೆ ನಟಿ ಜೀವತುಂಬಿದ್ದಾರೆ.
ಪತಿ ಸುದರ್ಶನ್ ಅವರು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಗುರುತಿಸಿಕೊಂಡಿದ್ದರು. ಈಗ ಭಾಗ್ಯಲಕ್ಷ್ಮಿ (Bhagyalakshmi) ಸೀರಿಯಲ್ ಮೂಲಕ ಸುದರ್ಶನ್ ನಾಯಕನಾಗಿ ಶೈನ್ ಆಗ್ತಿದ್ದಾರೆ. ಭಾಗ್ಯಗೆ ಕಾಟ ಕೊಡುವ ಪತಿಯಾಗಿ ತಾಂಡವ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಇಬ್ಬರು ಚಿತ್ರರಂಗದಲ್ಲಿ ಇರುವ ಕಾರಣ ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಸಾಥ್ ನೀಡ್ತಿದ್ದಾರೆ.
ಸದ್ಯ ನಟಿ ಸಂಗೀತಾ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ. ಕೊನೆಗೂ ಮೂಗು ಚುಚ್ಚಿಸಿಕೊಂಡೇ ಅಂತಾ ಪೋಸ್ಟ್ ಮಾಡಿದ್ದಾರೆ. ಮೂಗು ಚುಚ್ಚಿಸಿದ ಬಳಿಕ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪತ್ನಿ ನಯಾ ಲುಕ್ ನೋಡಿ ಪತಿ ಸುದರ್ಶನ್ ಕೂಡ ಖುಷಿಪಟ್ಟಿದ್ದಾರೆ. ನನ್ನ ಹೆಂಡ್ತಿ ಮುದ್ದಾಗಿ ಕಾಣಿಸುತ್ತಿದ್ದಾಳೆ ಅಂತಾ ನಟ ಸುದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.