ಸಮಂತಾ (Samantha) ಪದೇ ಪದೇ ಸಿಂಪತಿ ಗಿಟ್ಟಿಸಿಕೊಳ್ತಾರೆ. ಮಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ದಿಟ್ಟತನಕ್ಕೆ ಫ್ಯಾನ್ಸ್ ಅಷ್ಟಿಷ್ಟಲ್ಲ. ಸಿನಿಮಾ ಮಾಡದೆಯೇ ಜಾಲತಾಣದಲ್ಲಿರುವ ಫಾಲೋವರ್ಸ್‌ಗಳಿಂದ ಜೀವನ ಮಾಡುತ್ತಿದ್ದಾರೆ ಸಮಂತಾ. ಅದೇ ಜಾಲತಾಣದಲ್ಲಿ ತಪ್ಪು ಮಾಹಿತಿ ಕೊಟ್ಟು ಪೇಚಿಗೆ ಸಮಂತಾ ಸಿಲುಕಿದ್ದಾರೆ. ಸ್ಯಾಮ್‌ಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ವರ್ತೂರು ಸಂತೋಷ್ ಹೆಸರು ಹೇಳದೇ ಕ್ಷಮೆ ಕೇಳಿದ ಜಗ್ಗೇಶ್

ಲಿವರ್ ಡಿಟಾಕ್ಸಿಂಗ್‌ಗೆ ಏನೇನ್ ಮಾಡಬೇಕು ಎಂಬುದರ ಬಗ್ಗೆ ಜನರಿಗೆ ಕೊಂಚ ಸಲಹೆ ಕೊಟ್ಟಿದ್ದಾರೆ. ಅವರ ಜೊತೆ ವೈದ್ಯರು ಕೂಡ ಸಂಭಾಷಣೆಯಲ್ಲಿ ತೊಡಗುತ್ತಾರೆ. ಇವರಿಬ್ಬರ ಸಂಭಾಷಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವೈದ್ಯರೊಬ್ಬರು ಎಕ್ಸ್‌ನಲ್ಲಿ ಸಮಂತಾ ವಿರುದ್ಧ ಹರಿಹಾಯ್ದಿದ್ದಾರೆ. ಸಮಂತಾ ಜನರಿಗೆ ಕೊಡ್ತಿರುವ ಮಾಹಿತಿ ತಪ್ಪಾಗಿದೆ. ಗೊತ್ತಿಲ್ಲ ಅಂದ್ರೆ ಸುಮ್ಮನೆ ಇರಬೇಕು. ಆರೋಗ್ಯದ ವಿಚಾರವಾಗಿ ತಪ್ಪು ಸಂದೇಶ ಕೊಡಬಾರದು ಅಂತ ಕೆಂಡಕಾರಿದ್ದಾರೆ. ಈ ಬಗ್ಗೆ ಸಮಂತಾ ಕಡೆಯಿಂದ ಪ್ರತ್ಯುತ್ತರ ಬಂದಿಲ್ಲ.

ಆದರೆ ಯಶೋದ ಮತ್ತು ಖುಷಿ ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 6 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ.
ಸಮಂತಾಗೆ ಟಾಲಿವುಡ್ ಮಾತ್ರವಲ್ಲ ಬಾಲಿವುಡ್‌ನಿಂದಲೂ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಹಾಗಾಗಿ ಸಮಂತಾ ಸಿನಿಮಾ ಮತ್ತು ಲುಕ್ ಹೇಗಿರಲಿದೆ ಎಂಬ ಚರ್ಚೆ ಕೂಡ ನಡೆದಿದೆ. ಹೊಸ ಕೆಲಸ ಅವರ ಕೆರಿಯರ್‌ಗೆ ತಿರುವು ಕೊಡಲಿ ಎಂದು ಸ್ಯಾಮ್ ಫ್ಯಾನ್ಸ್ ಆಶಿಸುತ್ತಿದ್ದಾರೆ.



