ಸೌತ್ ನಟಿ ಸಮಂತಾ (Samantha) ಆರೋಗ್ಯದಲ್ಲಿ ಇದೀಗ ಚೇತರಿಕೆ ಕಂಡಿದೆ. ಸಿನಿಮಾಗೆ ಮತ್ತೆ ಕಮ್‌ಬ್ಯಾಕ್ ಆಗೋಕೆ ಸ್ಯಾಮ್ ರೆಡಿಯಾಗ್ತಿದ್ದಾರೆ. ಇದರ ನಡುವೆ ತನ್ನ ಕೆಲಸವನ್ನು ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿಲ್ಲ ಎಂದು ಸಮಂತಾ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ:ರಾಮನನ್ನು ಕಣ್ತುಂಬಿಕೊಂಡು ಪುನೀತನಾದೆ: ರಕ್ಷಿತ್ ಬಿಚ್ಚಿಟ್ಟ ಅನುಭವ
ಸಮಂತಾ ಅವರಿಗೆ ಮಯೋಸೈಟಿಸ್ ಕಾಯಿಲೆ ಕಾಣಿಸಿಕೊಂಡಿತ್ತು. ಇದು ಅಪರೂಪದಲ್ಲೇ ಅಪರೂಪದ ಕಾಯಿಲೆಯಾಗಿತ್ತು. ಹಾಗಾಗಿ ಅದಕ್ಕೆ ಸೂಕ್ತ ಚಿಕಿತ್ಸೆ ಕೂಡ ಪಡೆದು ಮತ್ತೆ ಸಮಂತಾ ಆ್ಯಕ್ಟೀವ್ ಆಗಿದ್ದಾರೆ. ಇದೀಗ ತಮ್ಮದೇ ಯೂಟ್ಯೂಬ್ ಚಾನೆಲ್ ಮಾಡಿ ನಟಿ ಹೆಲ್ತ್ ಟಿಪ್ಸ್ ಕೊಡ್ತಿದ್ದಾರೆ. ತನ್ನ ಆರೋಗ್ಯದಲ್ಲಿ ಆಗಿದ್ದ ಸಮಸ್ಯೆ ಬೇರೇ ಅವರಿಗೆ ಆಗಬಾರದು ಎಂದು ಆರೋಗ್ಯದ ಕುರಿತು ವಿಡಿಯೋ ಮಾಡಲು ಶುರು ಮಾಡಿದರು. ಸಾಮಾನ್ಯರ ಗತಿ ಏನು? ಈ ಕಾರಣದಿಂದಲೇ ಸಮಂತಾ ಒಳ್ಳೆಯ ಉದ್ದೇಶ ಇಟ್ಟುಕೊಂಡು ವಿಡಿಯೋ ಮಾಡುತ್ತಿದ್ದಾರೆ.
ಈ ವಿಡಿಯೋದಲ್ಲಿ ಇಮ್ಯೂನಿಟಿ ಸಿಸ್ಟಂನ ವೃದ್ಧಿಸಿಕೊಳ್ಳೋದು ಹೇಗೆ, ಅದರಿಂದ ಆಗೋ ಪ್ರಯೋಜನಗಳು ಏನು ಎಂಬಿತ್ಯಾದಿ ವಿಚಾರಗಳಲ್ಲಿ ಅವರು ಟಿಪ್ಸ್ ನೀಡುತ್ತಿದ್ದಾರೆ. ಮೊದಲ ಎಪಿಸೋಡ್ ಎರಡು ವಾರಕ್ಕೆ ಕೇವಲ ಒಂದೂವರೆ ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. 2ನೇ ವಿಡಿಯೋ ಆರು ದಿನಕ್ಕೆ 50 ಸಾವಿರ ವೀವ್ಸ್ ಕೂಡ ರೀಚ್ ಆಗಿಲ್ಲ.
‘ಪುಷ್ಪ’ (Pushpa) ಹಾಡಿಗೆ ಸೊಂಟ ಬಳುಕಿಸಿದಾಗ ಸಿಕ್ಕ ರೆಸ್ಪಾನ್ಸ್, ಒಳ್ಳೆಯ ಉದ್ದೇಶಕ್ಕಾಗಿ ಮಾಡುತ್ತಿರುವ ವಿಡಿಯೋ ಜನರಿಗೆ ತಲುಪುತ್ತಿಲ್ಲ. ಅಭಿಮಾನಿಗಳು ಸ್ಪಂದಿಸುತ್ತಿಲ್ಲ ಎಂದು ಸಮಂತಾ ಬೇಸರ ಹೊರಹಾಕಿದ್ದಾರೆ.
ಅಂದಹಾಗೆ, ದಳಪತಿ ವಿಜಯ್ ಕೊನೆಯ ಸಿನಿಮಾಗೆ ಸಮಂತಾ ಹೀರೋಯಿನ್ ಆಗಿದ್ದಾರೆ. ಈ ಚಿತ್ರಕ್ಕೆ ಅಟ್ಲೀ ಡೈರೆಕ್ಷನ್ ಮಾಡಲಿದ್ದಾರೆ.