ನಾಗಚೈತನ್ಯ ಮತ್ತು ಸಮಂತಾ ದೂರವಾಗಿ ಹಲವು ತಿಂಗಳುಗಳೇ ಉರುಳಿವೆ. ಇಬ್ಬರೂ ತಮ್ಮ ಪಾಡಿಗೆ ತಾವು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ದಾಂಪತ್ಯದ ಹೊಸ ಹೊಸ ಮುಖಗಳು ಮಾತ್ರ ಅನಾವರಣಗೊಳ್ಳುತ್ತಲೇ ಇವೆ. ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ
ಸಮಂತಾ ಬಗ್ಗೆ ನಾಗಚೈತನ್ಯ ಅಭಿಮಾನಿಗಳು ಸಲ್ಲದ ಆರೋಪ ಮಾಡಿದರು. ಅವರು ಯಾವುದೇ ಸಿನಿಮಾ ಒಪ್ಪಿಕೊಂಡರೂ, ಅದಕ್ಕೆ ಕೆಟ್ಟದ್ದಾಗಿ ಕಾಮೆಂಟ್ ಮಾಡಿದರು. ಪುಷ್ಪಾ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದಾಗಲಂತೂ ಮಾನಹಾನಿ ಆಗುವಂತಹ ಸಂದೇಶಗಳನ್ನು ಕಳುಹಿಸಿದರು. ಇದೀಗ ಮದ್ವೆ ಸೀರೆ ಸುದ್ದಿ ಹಿಡಿದುಕೊಂಡು ಜಗ್ಗಾಡುತ್ತಿದ್ದಾರೆ. ಇದನ್ನೂ ಓದಿ : ಸಿನಿಮಾ ರಂಗಕ್ಕೆ ಬಾ ಅನ್ನಲಿಲ್ಲ ಬಂದ, ರಾಜಕಾರಣಕ್ಕೆ ಅವನನ್ನೇ ಕೇಳಬೇಕು : ಪುತ್ರನ ಬಗ್ಗೆ ಸುಮಲತಾ ಮಾತು
ಈಗ ತೆಲುಗು ಸಿನಿಮಾ ರಂಗದಲ್ಲಿ ಚಿತ್ರಗಳಿಗಿಂತ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿಯೆಂದರೆ ಸಮಂತಾ ಅವರು ಮದ್ವೆ ಸೀರೆಯದ್ದು. ಮದುವೆ ದಿನದಂದು ನಾಗಚೈತನ್ಯ ಕುಟುಂಬವು ಬೆಲೆಬಾಳು ರೇಷ್ಮೆ ಸೀರೆಯನ್ನು ಸಮಂತಾಗೆ ನೀಡುತ್ತು. ಮದುವೆ ಸಂದರ್ಭದಲ್ಲಿ ಆ ಸೀರೆಯದ್ದೇ ಹೈಲೆಟ್ ಆಗಿತ್ತು. ಈಗ ಆ ಸೀರೆಯನ್ನೂ ನಾಗಚೈತನ್ಯ ಕುಟುಂಬಕ್ಕೆ ಸಮಂತಾ ವಾಪಸ್ಸು ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರಿಂದಾಗಿ ಅಕ್ಕಿನೇನಿ ಕುಟುಂಬ ತೀರಾ ಮುಜಗರಕ್ಕೀಡಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ
ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡ ನಂತರ ಸಾಯುವತನಕ ಜತೆಗಿರುತ್ತೇನೆ ಎಂದು ಪ್ರಮಾಣ ಮಾಡಿದ ಪತಿಯನ್ನೇ ಬಿಟ್ಟು ಬಂದಿದ್ದೇನೆ. ಇನ್ನು ಅವರು ಕೊಟ್ಟಿರುವ ವಸ್ತುಗಳು ಯಾವ ಲೆಕ್ಕ ಎನ್ನುವ ಧೋರಣೆಯಿಂದಲೇ ಸಮಂತಾ ಹಾಗೆ ಮಾಡಿದ್ದಾರೆ ಎನ್ನುವುದು ಸದ್ಯ ಸುದ್ದಿಗೆ ಸಿಕ್ಕ ಆಹಾರ.