ಟಾಲಿವುಡ್ ನಟಿ ಸಮಂತಾ (Samantha) ಸದ್ಯ ಬಾಲಿವುಡ್‌ನಲ್ಲಿ (Bollywood) ಬ್ಯುಸಿಯಾಗಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡಿರುವ ನಟಿ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಇದರ ನಡುವೆ ಇದೀಗ ಮತ್ತೆ ಸಮಂತಾರ ವೈಯಕ್ತಿಕ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ. ಮಾಜಿ ಪತಿ ನಾಗಚೈತನ್ಯ ಸಹೋದರ ಅಖಿಲ್ (Akhil Akkineni) ಜೊತೆ ಸಮಂತಾ ಟಚ್‌ನಲ್ಲಿದ್ದಾರೆ.
ನಾಗಚೈತನ್ಯ ಜೊತೆ ಸಮಂತಾ ಡಿವೋರ್ಸ್ ಆಗಿ 3 ವರ್ಷಗಳು ಕಳೆದಿವೆ. ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಇಬ್ಬರೂ ತಮ್ಮ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಮಾಜಿ ಪತಿ ಮತ್ತು ಅವರ ಆಪ್ತರ ಜೊತೆ ಸಮಂತಾ ಒಡನಾಟದಿಂದ ದೂರವಿದ್ದಾರೆ. ಆದರೆ ನಾಗಚೈತನ್ಯ ಸಹೋದರ ಅಖಿಲ್ ಅಕ್ಕಿನೇನಿ ಜೊತೆ ಸಮಂತಾ ಫ್ರೆಂಡ್‌ಶಿಪ್ ಇಂದಿಗೂ ಮುಂದೂವರೆದಿದೆ.

ಅಖಿಲ್ ಬರ್ತ್‌ಡೇಗೆ ಮಾತ್ರವಲ್ಲ. ಅವರ ಸಿನಿಮಾಗಳ ಪೋಸ್ಟರ್ ಶೇರ್ ಮಾಡಿ ಸಿನಿ ಕೆರಿಯರ್‌ಗೂ ಶುಭಹಾರೈಸಿದ್ದು ಇದೆ. ಹೀಗೆ ಅಕ್ಕಿನೇನಿ ಕುಟುಂಬದ ಜೊತೆ ಒಡನಾಟ ಹೊಂದಿರುವ ಸಮಂತಾ ಮುಂದೆ ಮತ್ತೆ ನಾಗಚೈತನ್ಯ ಜೊತೆ ಒಂದಾಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ. ಮತ್ತೆ ಜೋಡಿ ಸಿಹಿಸುದ್ದಿ ಕೊಡಲಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.


