ಸೌತ್ ಬ್ಯೂಟಿ ಸಮಂತಾ (Samantha) ಸದ್ಯ ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ಮತ್ತೆ ಬಣ್ಣ ಹಚ್ಚೋಕೆ ಸಜ್ಜಾಗಿದ್ದಾರೆ. ಹೀಗಿರುವಾಗ ಸಮಂತಾ ಬಗ್ಗೆ ಹೊಸದೊಂದು ಅಪ್ಡೇಟ್ ಸಿಕ್ಕಿದೆ. ‘ಪುಷ್ಪ’ ಪಾರ್ಟ್ 2ನಲ್ಲಿ ಕೂಡ ಸಮಂತಾ ಇರುತ್ತಾರೆ. ಆದರೆ ಐಟಂ ಡ್ಯಾನ್ಸ್ಗಾಗಿ ಅಲ್ಲ.
Advertisement
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ’ (Pushpa) ಚಿತ್ರ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಹಿಟ್ ಲಿಸ್ಟ್ ಸೇರಿತ್ತು. ಈ ಚಿತ್ರದ ಯಶಸ್ಸಿಗೆ ಸಮಂತಾ ಐಟಂ ಡ್ಯಾನ್ಸ್ ಕೂಡ ಕಾರಣವಾಗಿತ್ತು. ಹಾಗಾಗಿ ಪಾರ್ಟ್ 2ನಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಚಿತ್ರತಂಡ ಕೇಳಿಕೊಂಡಿತ್ತು. ಆದರೆ ಸಮಂತಾ ಮಾತ್ರ ಐಟಂ ಹಾಡಿಗೆ ಸೊಂಟ ಬಳುಕಿಸಲು ನೋ ಎಂದಿದ್ದಾರೆ.
Advertisement
Advertisement
ಸಮಂತಾರನ್ನು (Samantha) ಬಿಟ್ಟು ಕೊಡಲು ಮನಸ್ಸಿಲ್ಲದ ಕಾರಣ, ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಲು ಚಿತ್ರತಂಡ ಕೋರಿದೆ. ಅದಕ್ಕೆ ಸಮಂತಾ ಕೂಡ ಓಕೆ ಎಂದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ‘ರಂಗಸ್ಥಳಂ’ ಚಿತ್ರದಲ್ಲಿ ಸುಕುಮಾರ್ ನಿರ್ದೇಶನದಲ್ಲಿ ಸ್ಯಾಮ್ ನಟಿಸಿದ್ದರು. ಅಲ್ಲು ಅರ್ಜುನ್ ಜೊತೆ ಕೂಡ ಸಮಂತಾ ನಟಿಸಿದ್ದಾರೆ. ಜೊತೆಗೆ ಉತ್ತಮ ಒಡನಾಟವಿದೆ. ಹಾಗಾಗಿ ಚಿತ್ರದಲ್ಲಿ ನಟಿಸಲು ಸಮಂತಾ ಒಪ್ಪಿದ್ದಾರಂತೆ.
Advertisement
ಇತ್ತೀಚಿನ ಸಂದರ್ಶನವೊಂದರಲ್ಲಿ ‘ಪುಷ್ಪ 2’ ಚಿತ್ರದ ಹಾಡಿನ ಬಗ್ಗೆ ಸಮಂತಾ ಮಾತನಾಡಿದ್ದರು. ಊ ಅಂಟಾವ ಮಾವ ಹಾಡು ಆ ದಿವಸಗಳಲ್ಲಿ ನನಗೆ ಪ್ರಯೋಗವಾಗಿತ್ತು. ಹಾಗಾಗಿ ಹಾಡಿನಲ್ಲಿ ಕಾಣಿಸಿಕೊಳ್ಳಲು ಒಪ್ಪಿದೆ. ಮೊದಲ ದಿನ ಡಾನ್ಸ್ ಮಾಡುವಾಗ ಅಕ್ಷರಶಃ ಹೆದರಿದ್ದೆ. ಮೈ ನಡುಗುತ್ತಿತ್ತು. ಅದಕ್ಕೆ ಕಾರಣ ನಾನು ಆರೋಗ್ಯವಾಗಿರಲಿಲ್ಲ. ನನಗೆ ನಾನು ತಗೆದುಕೊಂಡ ಸವಾಲು ಅದಾಗಿತ್ತು ಎಂದು ಸಮಂತಾ ಮಾತನಾಡಿದ್ದರು.
ಮತ್ತೆ ಇಂತಹ ಹಾಡುಗಳಲ್ಲಿ ತಾವು ಕಾಣಿಸಿಕೊಳ್ಳುವುದಿಲ್ಲವೆಂದು ಸ್ಪಷ್ಟನೆ ಕೂಡ ನೀಡಿದ್ದರು. ನನ್ನ ದೇಹ ಸೆಕ್ಸಿಯಾಗಿಲ್ಲ. ಮಾದಕತೆ ಎನ್ನುವುದು ನನ್ನ ಪಾಲಿಗೆ ದೂರ. ನಾನು ಅದರಲ್ಲಿ ಇರಲು ಇಷ್ಟ ಪಡುವುದಿಲ್ಲ. ಹಾಗಾಗಿ ಮತ್ತೆ ಆ ರೀತಿಯ ಗೀತೆಗಳಿಗೆ ಹೆಜ್ಜೆ ಹಾಕಲಾರೆ ಹಾಗೂ ಪ್ರಯೋಗಕ್ಕೂ ಮುಂದಾಗಲಾರೆ ಎಂದು ಸಮಂತಾ ಹೇಳಿದ್ದರು. ಹಾಗಾಗಿ ಮತ್ತೆ ‘ಪುಷ್ಪ 2’ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ನಟಿ ನಿರಾಕರಿಸಿದ್ದಾರೆ.