ಸೌತ್ ನಟಿ ಸಮಂತಾ (Samantha) `ಶಾಕುಂತಲಂ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. `ಯಶೋದ’ (Yashoda) ಚಿತ್ರದ ಸಕ್ಸಸ್ ಬಳಿಕ ಶಾಕುಂತಲೆಯಾಗಿ ಮಿಂಚಲು ಸ್ಯಾಮ್ ಸಜ್ಜಾಗಿದ್ದಾರೆ. ಈ ನಡುವೆ ನಟಿ ಸಮಂತಾಗೆ ಯಾರನ್ನಾದರೂ ಡೇಟ್ ಮಾಡುವಂತೆ ಅಭಿಮಾನಿಯೊಬ್ಬರು ಬೇಡಿಕೆಯಿಟ್ಟಿದ್ದಾರೆ. ಇದನ್ನೂ ಓದಿ: ಜೀವನವನ್ನ ಕೊನೆ ಮಾಡ್ಕೋಬೇಕು ಅಂದ್ಕೊಂಡಿದ್ದೆ ಅವ್ರು ಉಳಿಸಿದ್ರು: ರಮ್ಯಾ
Advertisement
ನಾಗಚೈತನ್ಯ (Nagachaitanya) ಜೊತೆಗಿನ ಸಂಬಂಧಕ್ಕೆ ಫುಲ್ ಸ್ಟಾಪ್ ಇಟ್ಟ ಮೇಲೆ ಸಮಂತಾ ತಮ್ಮ ಸಿನಿಮಾ- ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಸದ್ಯ ʻಶಾಕುಂತಲಂʼ (Shakuntalam) ಸಿನಿಮಾ ಇದೇ ಏ.14ಕ್ಕೆ ತೆರೆಗೆ ಬರುತ್ತಿದೆ. ಈ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಸಮಂತಾಗೆ ಅಭಿಮಾನಿಯೊಬ್ಬರು ವಿಶೇಷ ಮನವಿ ಮಾಡಿದ್ದಾರೆ.
Advertisement
Advertisement
ನನಗೆ ಗೊತ್ತು ನಾನು ಹೇಳುವ ಜಾಗದಲ್ಲಿಲ್ಲ ಎಂದು. ಆದರೆ, ಯಾರ ಜೊತೆಗಾದರೂ ಡೇಟ್ ಮಾಡಿ ಎಂದು ಶ್ರಾವಂತಿ ಹೆಸರಿನ ಅಭಿಮಾಯೊಬ್ಬರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸಮಂತಾ, `ನೀವು ಪ್ರೀತಿಸಿದಂತೆ ನನ್ನನ್ನು ಮತ್ಯಾರು ಪ್ರೀತಿ ಮಾಡುತ್ತಾರೆ’ ಎಂದು ಸಮಂತಾ ಅಭಿಮಾನಿಗೆ ಪ್ರತಿಕ್ರಿಯೆ ನೀಡಿದ್ದಾರೆ.
Advertisement
Who will love me like you do ???????? https://t.co/kTDEaF5xD5
— Samantha (@Samanthaprabhu2) March 26, 2023
ಸಮಂತಾ ಈ ಉತ್ತರ ಅಭಿಮಾನಿಗಳ ದಿಲ್ ಗೆದ್ದಿದೆ. ಅನಾರೋಗ್ಯದ ನಡುವೆಯೂ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುತ್ತಿರುವ ನಟಿಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.