ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಜೊತೆ ಶ್ರೀಲೀಲಾ (Sreeleela) ಸೊಂಟ ಬಳುಸಿರುವ ‘ಕಿಸ್ಸಿಕ್’ ಸಾಂಗ್ ರಿಲೀಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೇ ವಿವ್ಸ್ ಪಡೆಯುತ್ತಿದೆ. ಸಮಂತಾ ಮುಂದೆ ಶ್ರೀಲೀಲಾ ಠುಕ್ ಆದ್ರಾ? ಅಸಲಿಗೆ ‘ಕಿಸ್ಸಿಕ್’ ಸಾಂಗ್ ಹೇಗಿದೆ ಎಂಬುದನ್ನು ಸ್ಯಾಮ್ ರಿಯಾಕ್ಟ್ ಮಾಡಿದ್ದಾರೆ.
- Advertisement -
ಕಲರ್‌ಫುಲ್ ಸೆಟ್‌ನಲ್ಲಿ ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಕೊರಿಯೋಗ್ರಫಿ ಮಾಡಿದ್ದಾರೆ. ಪುಷ್ಪರಾಜ್ ಜೊತೆಗಿನ ಶ್ರೀಲೀಲಾ ಡ್ಯಾನ್ಸ್ ನೋಡುಗರಿಗೆ ಕಿಕ್ ಕೊಟ್ಟಿದೆ. ಈ ಸಾಂಗ್ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:‘ವಾರ್ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಐಟಂ ಡ್ಯಾನ್ಸ್?
- Advertisement -
- Advertisement -
ಶ್ರೀಲೀಲಾ ಡ್ಯಾನ್ಸ್ ಸ್ಕಿಲ್ ನೋಡಿ ಸಮಂತಾ (Samantha) ರಿಯಾಕ್ಟ್ ಮಾಡಿದ್ದಾರೆ. ‘ಕಿಲ್ಲಿಂಗ್ ಇಟ್’ ಎಂದು ಕನ್ನಡತಿಯ ಡ್ಯಾನ್ಸ್ ಪ್ರತಿಭೆ ಸಮಂತಾ ಮೆಚ್ಚುಗೆ ಸೂಚಿಸಿದ್ದಾರೆ. ಶಾಂತವಾಗಿರಿ ಮತ್ತು ‘ಪುಷ್ಪ 2’ಗಾಗಿ ಕಾಯಿರಿ ಎಂದು ಫ್ಯಾನ್ಸ್‌ಗೆ ನಟಿ ಹೇಳಿದ್ದಾರೆ. ಒಟ್ನಲ್ಲಿ ‘ಕಿಸ್ಸಿಕ್’ ಸಾಂಗ್ ನಟಿಗೆ ಖುಷಿ ಕೊಟ್ಟಿರೋದಂತು ಗ್ಯಾರಂಟಿ.
- Advertisement -
View this post on Instagram
ಇನ್ನೂ ಅಲ್ಲು ಅರ್ಜುನ್, ರಶ್ಮಿಕಾ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ನಟನೆಯ ಸಿನಿಮಾ ಡಿ.5ಕ್ಕೆ ರಿಲೀಸ್ ಆಗಲಿದೆ. ಶ್ರೀಲೀಲಾ ಸ್ಪೆಷಲ್ ಸಾಂಗ್ ಕೂಡ ಚಿತ್ರಕ್ಕೆ ಪ್ಲಸ್ ಆದಂತಿದೆ. ಡಾಲಿ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.