ಟಾಲಿವುಡ್ನ (Tollywood) ಹಾಟ್ ಬ್ಯೂಟಿ ಸಮಂತಾ (Samantha) ಮೈಯೋಸಿಟಿಸ್ ಕಾಯಿಲೆಯ ಜೊತೆ ಸೆಣಸಾಡುತ್ತಲೇ ಜೀವನ ಸಾಗಿಸುತ್ತಿದ್ದಾರೆ. ಎಷ್ಟೇ ನೋವಿದ್ದರೂ ಕುಗ್ಗದೇ ಸಿನಿಮಾಗಳನ್ನ ಮಾಡುತ್ತ ತಮ್ಮ ಒಂಟಿ ಜೀವನವನ್ನ ಗಟ್ಟಿಯಾಗಿ ಎದುರಿಸುತ್ತಿದ್ದಾರೆ. ಹೀಗಿರುವಾಗ ಸ್ಯಾಮ್ ತಮ್ಮ 13 ವರ್ಷದ ಕೆರಿಯರ್ನಲ್ಲಿ ಬಗೆ ಬಗೆಯ ಪಾತ್ರಗಳನ್ನ ಮಾಡಿದ್ದಾರೆ. ಫೀಮೇಲ್ ಓರಿಯೆಂಟೆಡ್ (Female Oriented Films) ಪಾತ್ರಗಳನ್ನ ಮಾಡಿ ಜಯಿಸಿದ್ದಾರೆ. ಇದೀಗ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಲು ಸಮಂತಾ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸಮಂತಾ ಅವರು ನಾಗಚೈತನ್ಯ (Nagachaitanya) ಜೊತೆಗಿನ ಡಿವೋರ್ಸ್ (Divorce) ನಂತರ ಸಾಕಷ್ಟು ಸವಾಲುಗಳನ್ನ ಎದುರಿಸುತ್ತಿದ್ದಾರೆ. ವೈಯಕ್ತಿಕ ಜೀವನ, ಆರೋಗ್ಯ ಎಲ್ಲವೂ ಸ್ಯಾಮ್ಗೆ ಕೈಕೊಟ್ಟಿದೆ. ಆದರೂ ಕೂಡ ಛಲ ಬಿಡದೇ ನಟಿ ಮುನ್ನುಗ್ಗುತ್ತಿದ್ದಾರೆ. ರೀಲ್ ಮಾತ್ರವಲ್ಲ ರಿಯಲ್ ಆಗಿಯೂ ಗಟ್ಟಿಗಿತ್ತಿಯಾಗಿ ನಿಂತಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ನಡೆಯಲಿದೆ ಪುಲ್ಕಿತ್ ಜೊತೆ `ಗೂಗ್ಲಿ’ ನಟಿ ಕೃತಿ ಮದುವೆ
ಇನ್ನೂ ತಮ್ಮ 13 ವರ್ಷದ ಸಿನಿ ಬದುಕಿನಲ್ಲಿ ಭಿನ್ನ ಪಾತ್ರಗಳ ಮೂಲಕ ಸೈ ಎನಿಸಿಕೊಂಡಿರುವ ಸಮಂತಾ, ಮಹಿಳಾ ಪ್ರಧಾನ ಚಿತ್ರಗಳನ್ನ ಮಾಡಿ ಗೆದ್ದು ಬೀಗಿದ್ದಾರೆ. ಇತ್ತೀಚಿಗೆ `ಯಶೋದ’ ಚಿತ್ರ ಸೂಪರ್ ಸಕ್ಸಸ್ ಕಂಡಿತ್ತು. ಸದ್ಯದಲ್ಲೇ `ಶಾಕುಂತಲಂ’ ಚಿತ್ರ ಕೂಡ ರಿಲೀಸ್ಗೆ ರೆಡಿಯಿದೆ. ಈ ಬೆನ್ನಲ್ಲೇ ಮತ್ತೊಂದು ಲೇಡಿ ಓರಿಯೆಂಟೆಡ್ ಚಿತ್ರಕ್ಕೆ ಸಮಂತಾ ಓಕೆ ಎಂದಿದ್ದಾರೆ.
ಪ್ಯಾನ್ ಇಂಡಿಯಾ ರೇಂಜ್ನಲ್ಲಿ ರಿಲೀಸ್ ಆಗಲಿರುವ ಚಿತ್ರಕ್ಕೆ ಸಮಂತಾ ನಾಯಕಿ. ಎಂದೂ ಕಾಣಿಸಿಕೊಂಡಿರದ ಭಿನ್ನ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ ಸಿನಿಮಾದ ಬಗ್ಗೆ ಅಧಿಕೃತ ಅಪ್ಡೇಟ್ ಚಿತ್ರತಂಡದಿಂದ ಹೊರಬೀಳಲಿದೆ.