ಟಾಲಿವುಡ್ ನಟಿ ಸಮಂತಾ (Samantha) ಅವರು ನಾಗಚೈತನ್ಯಗೆ (Nagachaitanya) ಡಿವೋರ್ಸ್ (Divorce) ಕೊಟ್ಟು 2 ವರ್ಷ ಕಳೆದರೂ ಕೂಡ ಅವರ ವೈಯಕ್ತಿಕ ವಿಚಾರ ಇನ್ನೂ ಚಾಲ್ತಿಯಲ್ಲಿದೆ. ಮೈ ಮೇಲಿನ ಮಾಜಿ ಗಂಡನ ಹೆಸರಿನ ಟ್ಯಾಟೂ ಅಳಿಸದ ಸಮಂತಾ ಹೊಸ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದೀಗ ಸಮಂತಾ ಹೊಸ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ಗ್ಲ್ಯಾಮರಸ್ ಆಗಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಈ ಫೋಟೋದಲ್ಲಿ ಮಾಜಿ ಪತಿ ಚೈ ಹೆಸರಿನ ಟ್ಯಾಟೂ ಹೈಲೆಟ್ ಆಗಿದೆ. ನಟಿ ಇನ್ನೂ ಟ್ಯಾಟೂ ಅಳಿಸದೇ ಇರೋದನ್ನ ನೋಡಿ, ಈ ಜೋಡಿ ಮತ್ತೆ ಒಂದಾಗುತ್ತಾರಾ? ಇದು ಮುನ್ಸೂಚನೆ ಎಂದು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಇದನ್ನೂ ಓದಿ:ವಿನಯ್ ವಿರುದ್ಧ ಧ್ವನಿ ಎತ್ತದ ನಮ್ರತಾಗೆ ಕಿಚ್ಚನ ಖಡಕ್ ಕ್ಲಾಸ್
Advertisement
View this post on Instagram
Advertisement
ಹಚ್ಚೆ ಕಾಣಿಸಿದರೂ ಡೋಂಟ್ ಕೇರ್ ಎನ್ನದೇ ಫೋಟೋಗೆ ಸಮಂತಾ ಪೋಸ್ ಕೊಟ್ಟಿರೋದು ನೋಡಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಬ್ಬರು ಮುನಿಸು ಮರೆತು ಮತ್ತೆ ಒಂದಾದ್ರೆ ಖುಷಿ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ.
Advertisement
Advertisement
‘ಖುಷಿ’ ಚಿತ್ರದ ಬಳಿಕ ಸಮಂತಾ, ಕೆರಿಯರ್ ಬ್ರೇಕ್ ಕೊಟ್ಟಿದ್ದಾರೆ. ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸ್ಯಾಮ್, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ.