ಟಾಲಿವುಡ್ ನಟಿ ಸಮಂತಾ (Samantha) ಅವರು ನಾಗಚೈತನ್ಯಗೆ (Nagachaitanya) ಡಿವೋರ್ಸ್ (Divorce) ಕೊಟ್ಟು 2 ವರ್ಷ ಕಳೆದರೂ ಕೂಡ ಅವರ ವೈಯಕ್ತಿಕ ವಿಚಾರ ಇನ್ನೂ ಚಾಲ್ತಿಯಲ್ಲಿದೆ. ಮೈ ಮೇಲಿನ ಮಾಜಿ ಗಂಡನ ಹೆಸರಿನ ಟ್ಯಾಟೂ ಅಳಿಸದ ಸಮಂತಾ ಹೊಸ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

View this post on Instagram
ಹಚ್ಚೆ ಕಾಣಿಸಿದರೂ ಡೋಂಟ್ ಕೇರ್ ಎನ್ನದೇ ಫೋಟೋಗೆ ಸಮಂತಾ ಪೋಸ್ ಕೊಟ್ಟಿರೋದು ನೋಡಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಬ್ಬರು ಮುನಿಸು ಮರೆತು ಮತ್ತೆ ಒಂದಾದ್ರೆ ಖುಷಿ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ.
‘ಖುಷಿ’ ಚಿತ್ರದ ಬಳಿಕ ಸಮಂತಾ, ಕೆರಿಯರ್ ಬ್ರೇಕ್ ಕೊಟ್ಟಿದ್ದಾರೆ. ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸ್ಯಾಮ್, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ.

