ನಟಿ ಸಮಂತ್ ರುತ್ ಪ್ರಭು (Samantha) ತಾವು ಮದುವೆಯಲ್ಲಿ ಧರಿಸಿದ್ದ ಗೌನ್ (Gown) ಅನ್ನು ಕತ್ತರಿಸಿ, ಹೊಸ ವಿನ್ಯಾಸದಲ್ಲಿ ಕಾಸ್ಟ್ಯೂಮ್ ತಯಾರಿಸಿಕೊಂಡಿದ್ದಾರೆ. ಆ ಕಾಸ್ಟ್ಯೂಮ್ ಅನ್ನೇ ಧರಿಸಿಕೊಂಡು ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಆ ಹೊಸ ಕಾಸ್ಟ್ಯೂಮ್ ಧರಿಸಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಮಂತಾ ಅವರು ಮದುವೆ (Wedding) ಕಾಸ್ಟ್ಯೂಮ್ ಅನ್ನು ತಯಾರಿಸಿದವರು ಡಿಸೈನರ್ ಕ್ರೇಶಾ ಬಜಾಜ್ 9Kresha Bajaj), ಅವರೇ ಈಗ ಆ ಗೌನ್ ಅನ್ನು ಕತ್ತರಿಸಿ ಸ್ಟ್ರಾಪ್ ಲೆಸ್ ಡ್ರೆಸ್ ಆಗಿ ಪರಿವರ್ತನೆ ಮಾಡಿದ್ದಾರೆ. ಮಾಜಿ ಪತಿ, ನಟ ನಾಗ ಚೈತನ್ಯ ಅವರು ಬೇರೊಬ್ಬ ಹುಡುಗಿಯ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಈ ಕಾರ್ಯ ನಡೆದಿದ್ದು, ಬೇರೆ ಬೇರೆ ಅರ್ಥವನ್ನು ಕಲ್ಪಿಸುವಂತೆ ಮಾಡಿದೆ.
ಸಮಂತಾ ಹೊಸದಾಗಿ ವಿನ್ಯಾಸಗೊಂಡಿರುವ ಗೌನ್ ಅನ್ನು ಧರಿಸಿಕೊಂಡು, ‘ಇದು ನನ್ನ ಪ್ರೀತಿ ಗೌನ್’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ನನ್ನ ಹಳೆ ಬಟ್ಟೆಗಳನ್ನು ಮರುಬಳಕೆ ಮಾಡೋದು ಮೊದಲಿನಿಂದಲೂ ನನಗಿರೋ ಅಭ್ಯಾಸ’ ಎಂದು ಬರೆದು ಸಮಾಧಾನ ಪಟ್ಟುಕೊಂಡಿದ್ದಾರೆ.