ಮಾಜಿ ಪತಿ ನಾಗಚೈತನ್ಯ (Nagachaitanya) ಮತ್ತು ಶೋಭಿತಾ (Sobhita) ನಿಶ್ಚಿತಾರ್ಥದ ಬಳಿಕ ಸಮಂತಾ (Samantha) ಮೌನ ಮುರಿದಿದ್ದಾರೆ. ಪ್ರೀತಿ ಒಂದು ತ್ಯಾಗ ಎಂದು ಮಾರ್ಮಿಕವಾಗಿ ಸಮಂತಾ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಹ್ಯಾಪಿ ಆ್ಯನಿವರ್ಸರಿ ಚಿನ್ನ- ಅಗಲಿದ ಪತ್ನಿಗೆ ವಿಜಯ್ ರಾಘವೇಂದ್ರ ವಿಶ್
ಮಾಜಿ ಪತಿಯ ನಿಶ್ಚಿತಾರ್ಥದ ನಂತರ ಸಮಂತಾ ಪೋಸ್ಟ್ ವೈರಲ್ ಆಗಿದೆ. ಪ್ರೀತಿ ಎಂದರೆ ತ್ಯಾಗ. ನಾನು ಕೂಡ ಮಾತನ್ನು ಒಪ್ಪಿಕೊಳ್ಳುತ್ತೇನೆ. ಇದನ್ನು ಇಷ್ಟು ವರ್ಷಗಳಲ್ಲಿ ಅರಿತುಕೊಂಡೆ. ಬೇರೆ ಅವರು ನಮಗೆ ಪ್ರೀತಿ ಕೊಡದೆ ಇದ್ದರೂ ನಾವು ಅವರಿಗೆ ಪ್ರೀತಿ ಕೊಡಬೇಕಾಗುತ್ತದೆ. ಕೊಡ್ತಾನೇ ಇರಬೇಕಾಗುತ್ತದೆ. ಒಂದು ಹಂತದಲ್ಲಿ ನೀವು ಸಮತೋಲನ ಕಳೆದುಕೊಂಡರೂ ಪ್ರೀತಿ ತ್ಯಾಗವಾಗುತ್ತದೆ. ನನ್ನಿಂದ ಪ್ರೀತಿ ಮರಳಿ ನೀಡದೆ ಇದ್ದರೂ ನನ್ನನ್ನೂ ಇಷ್ಟಪಡುವ, ನನ್ನ ಮೇಲೆ ಪ್ರೀತಿಯ ಮಳೆಗೈಯುವ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ, ನಾಗಚೈತನ್ಯರಿಂದ ಡಿವೋರ್ಸ್ ಪಡೆದ ಮೇಲೆ ಆರೋಗ್ಯ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ತಿದ್ದಾರೆ.