ತೆಲುಗು ನಟಿ ಸಮಂತಾ (Samantha) ಡಿವೋರ್ಸ್ (Divorce) ನಂತರ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಅನಾರೋಗಕ್ಕೆ ತುತ್ತಾಗಿದ್ದ ನಟಿ ಈಗ ಚೇತರಿಸಿಕೊಂಡಿದ್ದಾರೆ. ಇದೀಗ ಹಿಂದೆ ತಾವು ಮಾಡಿರುವ ತಪ್ಪಿನ ಬಗ್ಗೆ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ಕರವೇ ಪ್ರತಿಭಟನೆ- ಲವ್ಲಿ ಸ್ಟಾರ್ ಪ್ರೇಮ್, ಪೂಜಾ ಗಾಂಧಿ ಬೆಂಬಲ
ಇದೀಗ ಪಾಡ್‌ಕಾಸ್ಟ್‌ನಲ್ಲಿ ಆರೋಗ್ಯಕ್ಕೆ ಅವಶ್ಯವಾದ ಆಹಾರ ಪದ್ಧತಿಗಳ ಬಗ್ಗೆ ನಟಿ ಮಾತನಾಡಿದ್ದಾರೆ. ಈ ವೇಳೆ, ನೀವು ಅನಾರೋಗ್ಯಕರ ಬ್ರ‍್ಯಾಂಡ್‌ಗಳನ್ನು ಸಹ ಪ್ರಚಾರ ಮಾಡಿದ್ದೀರಿ ಎಂದು ಅಭಿಮಾನಿ ಪ್ರಶ್ನೆ ಕೇಳಿದ್ದಾರೆ. ಹೌದು ನಾನು ಈ ಹಿಂದೆ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅವು ಉದ್ದೇಶಪೂರ್ವಕ ತಪ್ಪುಗಳಲ್ಲ. ಅವರ ಬಗ್ಗೆ ತಿಳಿದ ನಂತರ ಆ ಬ್ರಾಂಡ್‌ಗಳ ಪ್ರಚಾರವನ್ನು ನಿಲ್ಲಿಸಿದ್ದೇನೆ ಎಂದು ಸಮಂತಾ ಹೇಳಿದ್ದಾರೆ.
ಬ್ರೇಕ್ ಬಳಿಕ ಮತ್ತೆ ಸಿನಿಮಾಗೆ ಸಮಂತಾ ಬಂದಿದ್ದಾರೆ. ‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ‘ದಿ ಫ್ಯಾಮಿಲಿ ಮ್ಯಾನ್’ ಹೊಸ ಸೀಸನ್‌ನಲ್ಲಿ ಸಮಂತಾ ನಟಿಸಲಿದ್ದಾರೆ ಎನ್ನಲಾಗಿದೆ. ಬಾಲಿವುಡ್‌ನಿಂದ ಉತ್ತಮ ಅವಕಾಶಗಳು ನಟಿಯನ್ನು ಅರಸಿ ಬರುತ್ತಿವೆ.