ಮಾಜಿ ಪತಿಯ ನಿಶ್ಚಿತಾರ್ಥದ ಬೆನ್ನಲ್ಲೇ ಸಮಂತಾಗೆ ಮದುವೆ ಪ್ರಪೋಸಲ್

Public TV
1 Min Read
samantha 1 3

ಟಾಲಿವುಡ್ ನಟ ನಾಗಚೈತನ್ಯ (Nagachaitanya) ಮತ್ತು ನಟಿ ಶೋಭಿತಾ (Sobhita) ನಿಶ್ಚಿತಾರ್ಥದ ಬೆನ್ನಲ್ಲೇ ಸಮಂತಾಗೆ ಮದುವೆ ಪ್ರಪೋಸಲ್ ಬಂದಿದೆ. ಅಭಿಮಾನಿಯೊಬ್ಬ ತನ್ನನ್ನು ಮದುವೆಯಾಗುವಂತೆ ಸಮಂತಾರನ್ನು ಬೇಡಿಕೊಂಡಿದ್ದಾನೆ. ವಿಶೇಷವಾಗಿ ಪ್ರೇಮ ನಿವೇದನೆ ಮಾಡಿದಕ್ಕೆ, ಸಮಂತಾ (Samantha) ಕೂಡ ಸರಿ ಎಂದು ಒಪ್ಪಿಗೆ ನೀಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಸ್ಪೆಷಲ್ ಸಾಂಗ್‌ನಲ್ಲಿ ಇರಲಿದ್ದಾರೆ ಕನ್ನಡದ ನಟಿ

samantha 1

ಮುಕೇಶ್ ಚಿಂತಾ ಹೆಸರಿನ ಇನ್ಸ್ಟಾಗ್ರಾಂ ಬಳಕೆದಾರನೊಬ್ಬ ಸಮಂತಾರಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾನೆ. ಸಮಂತಾ ನೀವು ತುಂಬಾ ಬೇಸರ ಮಾಡಿಕೊಳ್ಳಬೇಕಿಲ್ಲ. ನಾನು ನಿಮಗಾಗಿ ಇದ್ದೇನೆ. ನಾನು ಮತ್ತು ನೀವು ಒಳ್ಳೆಯ ಜೋಡಿಯಾಗಬಹುದು. ನೀವು ಓಕೆ ಅಂದರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ. ನೀವು ನನಗೆ ಸ್ವಲ್ಪ ವರ್ಷ ಸಮಯ ಕೊಡಿ, ನಾನು ಚೆನ್ನಾಗಿ ಹಣ ಸಂಪಾದನೆ ಮಾಡಿ ನಿಮ್ಮ ಬಳಿಗೆ ಬರುತ್ತೇನೆ. ನನ್ನ ಹೃದಯವನ್ನು ಸದ್ಯಕ್ಕೆ ಟೋಕನ್ ಆಗಿ ಇಟ್ಟುಕೊಳ್ಳಿ. ದಯವಿಟ್ಟು ನನ್ನನ್ನು ಮದುವೆಯಾಗಿ ಸ್ಯಾಮ್. ಪ್ಲೀಸ್ ಸಮಂತಾ ಎಂದು ಅಭಿಮಾನಿ ಕೇಳಿಕೊಂಡಿದ್ದಾನೆ. ಇದನ್ನೂ ಓದಿ:ನಾನಿನ್ನೂ ವಿವಾಹಿತ ಎಂದು ಡಿವೋರ್ಸ್ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್

 

View this post on Instagram

 

A post shared by Mukesh Chintha (@mooookesh)

ವೈರಲ್ ಆಗಿರುವ ಈ ವಿಡಿಯೋ ಸಮಂತಾ ಗಮನಕ್ಕೂ ಬಂದಿದೆ. ಅದಷ್ಟೇ ಅಲ್ಲ, ಅಭಿಮಾನಿಯ ಮದುವೆ ಪ್ರಪೋಸಲ್ ವಿಡಿಯೋಗೆ ನಟಿ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಅಭಿಮಾನಿ, ಪ್ರೇಮ ನಿವೇದನೆ ಮಾಡಿದ ವಿಡಿಯೋದಲ್ಲಿ ಬ್ಯಾಕ್ ಗ್ರೌಂಡ್‌ನಲ್ಲಿ ಜಿಮ್ ದೃಶ್ಯಗಳಿವೆ. ಹಾಗಾಗಿ ಹಿಂಬದಿಯಲ್ಲಿರುವ ಜಿಮ್ ಬ್ಯಾಕ್ ಗ್ರೌಂಡ್ ಬಹುತೇಕ ನನಗೆ ಮನವರಿಕೆ ಮಾಡಿದೆ ಎಂದು ಹಾರ್ಟ್ ಸಿಂಬಲ್ ಹಾಕುವ ಮೂಲಕ ಅಭಿಮಾನಿಯ ಪ್ರಪೋಸಲ್‌ಗೆ ನಟಿ ಓಕೆ ಎಂದಿದ್ದಾರೆ.

ಸಮಂತಾ ಮಾಡಿದ ಕಾಮೆಂಟ್ ಕೂಡ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನಟಿಯ ರಿಯಾಕ್ಷನ್‌ಗೆ ಅಭಿಮಾನಿ ಕೂಡ ಖುಷಿಪಟ್ಟಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

Share This Article