ಸೌತ್ ಬ್ಯೂಟಿ ಸಾಯಿ ಪಲ್ಲವಿ, ಬಹುಬೇಡಿಕೆಯ ನಟಿಯರಲ್ಲಿ ಇವರು ಒಬ್ಬರು. ಕಳೆದ 2 ದಿನಗಳಿಂದ ಸಾಯಿ ಪಲ್ಲವಿಗೆ (Sai Pallavi) ಮದುವೆಯಾಗಿದೆ ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಫೋಟೋ ಸಮೇತ ವೈರಲ್ ಆಗಿದೆ. ಈ ಕುರಿತು ನಟಿ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ಬಗ್ಗೆ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮದುವೆ (Wedding) ಕುರಿತು ಟ್ವೀಟ್ಟರ್‌ನಲ್ಲಿ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿರುವ ನಟಿ, ಸಾಮಾನ್ಯವಾಗಿ, ನಾನು ವದಂತಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ನನಗೆ ಭಯವೂ ಇಲ್ಲ. ಆದರೆ ಆ ಸುದ್ದಿಗಳು ನನ್ನ ಕುಟುಂಬವೇ ಆಗಿರುವ ಸ್ನೇಹಿತರನ್ನು ಒಳಗೊಂಡು ಅವರ ಮೇಲೆ ಪರಿಣಾಮ ಬೀರುತ್ತಿದೆ ಎಂದಾಗ ನಾನು ಮಾತನಾಡಲೇ ಬೇಕಾಗಿದೆ.
ನನ್ನ ಸಿನಿಮಾದ ಪೂಜಾ ಸಮಾರಂಭದ ಫೋಟೋವನ್ನು ಉದ್ದೇಶಪೂರ್ವಕವಾಗಿ ಕ್ರಾಪ್ ಮಾಡಿ ವೈರಲ್ ಮಾಡಲಾಗುತ್ತಿದೆ. ಹಣ ಬಲದ ಮೂಲಕ ಅನಾಮಿಕ ಖಾತೆಗಳನ್ನು ಬಳಸಿ ಕೆಟ್ಟ ಉದ್ದೇಶದಿಂದ ಆ ಫೋಟೋವನ್ನು ವೈರಲ್ ಮಾಡಲಾಗಿದೆ. ನನ್ನ ಕೆಲಸದ ಬಗ್ಗೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಬೇಕಾದ ಸಮಯದಲ್ಲಿ, ಈ ರೀತಿಯ ಅನವಶ್ಯಕ ವಿಷಯಗಳ ಬಗ್ಗೆ ವಿವರಿಸುವ ಸನ್ನಿವೇಶ ಸೃಷ್ಟಿಯಾಗಿರುವ ಬಗ್ಗೆ ಬೇಸರವಿದೆ. ಈ ರೀತಿಯ ಅಸ್ವಸ್ಥತೆಯನ್ನು ಉಂಟುಮಾಡುವುದು ಬಹಳ ಹೀನಾಯ ಎಂದು ಸಾಯಿ ಪಲ್ಲವಿ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ:ಕಾವೇರಿ ಹೋರಾಟಕ್ಕೆ ನೇರವಾಗಿ ಇಳಿದ ನಟ ಅಭಿಷೇಕ್ ಅಂಬರೀಶ್
ವೈರಲ್ ಆಗಿರುವ ಚಿತ್ರದಲ್ಲಿ ಸಾಯಿ ಪಲ್ಲವಿ ಜೊತೆಗೆ ಇರುವ ವ್ಯಕ್ತಿಯ ಹೆಸರು ರಾಜಕುಮಾರ ಪೆರಿಯಸ್ವಾಮಿ. ಸಾಯಿ ಪಲ್ಲವಿ- ಶಿವಕಾರ್ತಿಕೇಯನ್ ನಟಿಸುತ್ತಿರುವ ಹೊಸ ಸಿನಿಮಾವನ್ನು ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ತೆಗೆದ ಚಿತ್ರವನ್ನು ಬೇರೆ ಅರ್ಥ ಬರುವ ರೀತಿ ಕ್ರಾಪ್ ಮಾಡಿ ವೈರಲ್ ಮಾಡಲಾಗಿದೆ.
‘ಲವ್ ಸ್ಟೋರಿ’ (Love Story) ಸಕ್ಸಸ್ ನಂತರ ಮತ್ತೆ ನಾಗಚೈತನ್ಯ (Nagachaitanya) ಜೊತೆ ಸಾಯಿ ಪಲ್ಲವಿ ಕೈಜೋಡಿಸಿದ್ದಾರೆ. ಅಲ್ಲು ಅರವಿಂದ್ ಸಿನಿಮಾವನ್ನು ನಿರ್ಮಾಣ ಮಾಡ್ತಿದ್ದಾರೆ.