ಟಾಲಿವುಡ್ (Tollywood) ನಟಿ ಸಾಯಿ ಪಲ್ಲವಿ (Sai Pallavi) ಸದ್ಯ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡ್ಯಾನ್ಸಿಂಗ್ ಕ್ವೀನ್ ಎಂದೇ ಹೆಸರು ಮಾಡಿರುವ ಸಾಯಿ ಪಲ್ಲವಿ ಬಗ್ಗೆ ಹೊಸ ವಿಚಾರವೊಂದು ಚರ್ಚೆಯಾಗುತ್ತಿದೆ. ಮೊಡವೆ ನಿವಾರಣೆಗಾಗಿ ನಟಿ ಸರ್ಜರಿ ಮೊರೆ ಹೋದ್ರಾ ಎಂಬ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.
‘ಪ್ರೇಮಂ’ (Premam Film) ಚಿತ್ರದ ಮೂಲಕ ಸಾಯಿ ಪಲ್ಲವಿ ಮಾಲಿವುಡ್‌ಗೆ ಕಾಲಿಟ್ಟಾಗ ಮುಖ ತುಂಬಾ ಮೊಡವೆ ಇತ್ತು. ಬಹುತೇಕ ಸಿನಿಮಾದಲ್ಲಿ ಮೇಕಪ್ ಇಲ್ಲದೇ ಕೂಡ ನಟಿಸಿದ್ದರು. ಈಗ ಅವರ ಮುಖದಲ್ಲಿ ಮೊಡವೆಗಳು ಮಾಯವಾಗಿದೆ. ಅದಕ್ಕೆ ಸರ್ಜರಿ ಮಾಡಿಸಿದ್ರಾ ಎಂಬ ಪ್ರಶ್ನೆ ನಟಿಗೆ ಸಂದರ್ಶನವೊಂದರಲ್ಲಿ ಎದುರಾಗಿದೆ. ಇದನ್ನೂ ಓದಿ:ತಮಿಳಿನ ರಿಮೇಕ್ ಸಿನಿಮಾದಲ್ಲಿ ಪೂಜಾ ಹೆಗ್ಡೆ
ಹದಿಹರೆಯದ ಹುಡುಗಿಯರಲ್ಲಿ ಮೊಡವೆಗಳು ಆಗೋದು ಸಾಮಾನ್ಯ ವಿಚಾರ. ನಂತರ ದಿನಗಳಲ್ಲಿ ಅವು ಕಡಿಮೆ ಆಗುತ್ತದೆ. ದಪ್ಪ ಕೂದಲಿಗಾಗಿ ನಾನು ಹೆಚ್ಚಾಗಿ ಪೋಷಕಾಂಶ ಆಹಾರವನ್ನು ಸೇವಿಸುತ್ತೇನೆ. ನಂತರ ಅಲೋವರಾ ಜೆಲ್ ಅನ್ನು ಹಚ್ಚಿಕೊಳ್ಳುತ್ತೇನೆ ಎಂದು ನಟಿ ವಿವರಿಸಿದ್ದಾರೆ. ಸರ್ಜರಿ ವಿಚಾರಕ್ಕೆ ನಟಿ ಸ್ಪಷ್ಟನೆ ನೀಡಿದ್ದಾರೆ.
ಆಮೀರ್ ಖಾನ್‌ಗೆ ನಾಯಕಿಯಾಗಿ ಸಾಯಿ ಪಲ್ಲವಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ರಣ್‌ಬೀರ್‌ಗೆ ಸೀತೆಯಾಗಿ ‘ರಾಮಾಯಣ’ (Ramayana Film) ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಗಚೈತನ್ಯಗೆ ನಾಯಕಿಯಾಗಿ ‘ತಾಂಡೇಲ್’ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಬಿಗ್ ಪ್ರಾಜೆಕ್ಟ್ ಚಿತ್ರಗಳು ನಟಿಯ ಕೈಯಲ್ಲಿವೆ.