ಮೊದಲ ಬಾರಿಗೆ ‘ನೋ ಲಿಪ್ ಕಿಸ್’ ಪಾಲಿಸಿ ಮುರಿದ ನಟಿ ಸಾಯಿ ಪಲ್ಲವಿ

Public TV
1 Min Read
Sai Pallavi 2

ಯಾವುದೇ ಕಾರಣಕ್ಕೂ ತಾವು ಕಿಸ್ ಮಾಡುವ ಅದರಲ್ಲೂ ಲಿಪ್ ಕಿಸ್ ಮಾಡುವ ಪಾತ್ರಗಳನ್ನು ಮಾಡಲಾರೆ ಎಂದು ದಕ್ಷಿಣದ ಹೆಸರಾಂತ ನಟಿ ಸಾಯಿ ಪಲ್ಲವಿ (Sai Pallavi) ಹೇಳಿಕೊಂಡಿದ್ದರು. ಈವರೆಗೂ ಅದನ್ನು ಪಾಲಿಸಿಕೊಂಡೇ ಬಂದಿದ್ದರು. ಮೈ ತೋರಿಸುವಂತಹ ದೃಶ್ಯವಾಗಲಿ ಅಥವಾ ಕಾಮ ಉತ್ತೇಜಿಸುವಂತಹ ಭಂಗಿಯಾಗಲಿ, ಲಿಪ್ ಕಿಸ್ (Lip Kiss) ಆಗಲಿ ಅವರು ಮಾಡಲಿಲ್ಲ.

sai pallavi 3

ಇದೀಗ ಮೊದಲ ಬಾರಿಗೆ ಅವರು ತಮ್ಮ ನೋ ಪಿಲ್ ಕಿಸ್ ಪಾಲಿಸಿಯನ್ನು ಮುರಿದಿರುವ ವಿಚಾರ ತೆಲುಗು ಸಿನಿಮಾ ರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 2022ರಲ್ಲಿ ರಿಲೀಸ್ ಆಗಿದ್ದ ನಾಗಚೈತನ್ಯ (Naga Chaitanya) ಜೊತೆಗಿನ ಸಿನಿಮಾದಲ್ಲಿ ಸಾಯಿ ಪಲ್ಲವಿ ಲಿಪ್ ಕಿಸ್ ಮಾಡಿದ್ದರು ಎಂದು ಫೋಟೋವೊಂದನ್ನು ಹರಿಬಿಟ್ಟು ಟ್ರೋಲ್ ಮಾಡಲಾಗುತ್ತಿದೆ.

sai pallavi 2

ಕೆಲವರು ಈ ಫೋಟೋವನ್ನು ಅಸಲಿ ಎಂದರೆ, ಇನ್ನೂ ಕೆಲವರು ನಕಲಿ ಎಂದೂ ಹೇಳುತ್ತಿದ್ದಾರೆ. ನಿಜ ಏನಂದರೆ, ಲವ್ ಸ್ಟೋರಿ ಸಿನಿಮಾದ ಹಾಡೊಂದರಲ್ಲಿ ಸಾಯಿ ಪಲ್ಲವಿ ಮುತ್ತಿಡುವ ಸನ್ನಿವೇಶವೊಂದು ಇದೆ. ಆದರೆ, ಈ ದೃಶ್ಯದಲ್ಲಿ ಅವರು ಯಾವುದೇ ಕಾರಣಕ್ಕೂ ತುಟಿಗೆ ಮುತ್ತು ಕೊಟ್ಟಿಲ್ಲವೆಂದು ಹೇಳಲಾಗುತ್ತಿದೆ.

 

ಕೆಲವು ದಿನಗಳ ಹಿಂದೆಯೂ ಈ ಕುರಿತಂತೆ ಸಾಯಿ ಪಲ್ಲವಿ ಮಾತನಾಡಿದ್ದರು. ನನಗೆ ಕಂಫರ್ಟ್ ಅನಿಸದ ದೃಶ್ಯಗಳಲ್ಲಿ ನಾನು ನಟಿಸಲ್ಲ ಎಂದು ಹೇಳಿದ್ದರು. ಅದರಲ್ಲೂ ಮುತ್ತಿನ ದೃಶ್ಯಗಳಿಂದ ದೂರ ಇರುವುದಾಗಿ ತಿಳಿಸಿದ್ದರು.

Share This Article