ದೀಪಕ್ ಮಧುವನಹಳ್ಳಿ ನಿರ್ದೇಶನದ ‘ಅನ್‌ಲಾಕ್ ರಾಘವ’ (Unlock Raghava) ಚಿತ್ರವೀಗ ಬಿಡುಗಡೆಗೊಂಡಿದೆ. ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ. ಕಾಮಿಡಿ, ಮನೋರಂಜನೆಯೊಂದಿಗೆ ಪ್ರೇಮ ಕಥಾನಕದ ಮೂಲಕವೂ ಈ ಸಿನಿಮಾ ನೋಡುಗರನ್ನು ಸೆಳೆಯುತ್ತಿದೆ. ಹೀಗೆ ಹಲವು ಕೊಂಬೆ ಕೋವೆಗಳನ್ನು ಹೊಂದಿರುವ ಈ ಕಥನಕ್ಕೆ ಗ್ಲಾಮರ್ ಟಚ್ ಕೊಟ್ಟಿರುವವರು ನಾಯಕಿ ರೆಚೆಲ್ ಡೇವಿಡ್ (Rechel David).
ಮೂಲತಃ ಕೇರಳದವರಾದರೂ, ಕನ್ನಡ ಕಲಿತು ಮಾತಾಡುವಷ್ಟು ಪ್ರೀತಿ ಹೊಂದಿರೋ ರೆಚೆಲ್, ಅನ್‌ಲಾಕ್ ರಾಘವನ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಭದ್ರವಾದ ನೆಲೆ ಕಂಡುಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ. ಇದನ್ನೂ ಓದಿ: ನಾಳೆ ನಿಮ್ಮೆದುರು ಬರ್‍ತಾನೆ ಅನ್ ಲಾಕ್ ರಾಘವ!
Advertisement
Advertisement
ರೆಚೆಲ್ ಡೇವಿಡ್ ಇಲ್ಲಿ ಜಾನಕಿ ಎಂಬ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ. ಈಗ್ಗೆ ಎರಡ್ಮೂರು ವರ್ಷಗಳ ಹಿಂದೆಯೇ ನಿರ್ದೇಶಕರು ರೆಚೆಲ್‌ಗೆ ಕಥೆ ಹೇಳಿ, ಅವರ ಪಾತ್ರದ ಬಗ್ಗೆ ವಿವರಿಸಿದ್ದರಂತೆ. ಆ ಕ್ಷಣವೇ ಇದೊಂದು ಅಪರೂಪದ ಕಥೆ ಎಂಬ ಸುಳಿವು ಸಿಕ್ಕಿದ್ದೇ ರೆಚೆಲ್ ಒಪ್ಪಿಗೆ ಸೂಚಿಸಿದ್ದರಂತೆ. ಹೀಗೆ ಈ ಸಿನಿಮಾ ಭಾಗವಾಗಿದ್ದ ರೆಚೆಲ್ ಚಿತ್ರೀಕರಣದ ಪ್ರತೀ ಹಂತವನ್ನೂ ಸಂಭ್ರಮಿಸಿದ್ದಾರೆ. ಹೊಸ ಕಲಿಕೆಯ ಜೊತೆಗೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದೀಗ ಪ್ರೇಕ್ಷಕರೂ ಕೂಡಾ ಜಾನಕಿ ಎಂಬ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಇಂಥಾ ಸಕಾರಾತ್ಮಕ ವಾತಾವರಣ ತನ್ನ ಮುಂದಿನ ಹೆಜ್ಜೆಗಳನ್ನು ಸುಗಮಗೊಳಿಸುತ್ತದೆ ಎಂಬ ನಂಬಿಕೆ ರೆಚೆಲ್‌ಗಿದೆ.
Advertisement
Advertisement
ಮಾಡೆಲಿಂಗ್ ಕ್ಷೇತ್ರಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಎಂಟ್ರಿ ಕೊಟ್ಟು ಆನಂತರ ಚಿತ್ರರಂಗದತ್ತ ಹೊರಳಿಕೊಂಡಿದ್ದವರು ರೆಚೆಲ್. ಬಾಂಬೆಯಲ್ಲಿ ಅನುಪಮ್ ಖೇರ್ ಆಕ್ಟಿಂಗ್ ಸ್ಕೂಲಿನಲ್ಲಿ ಪಳಗಿಕೊಂಡಿದ್ದ ಈಕೆ ಆ ನಂತರ ಮಲೆಯಾಳಂನ ಚಿತ್ರವೊಂದರ ನಾಯಕಿಯಾಗಿದ್ದರು. ಹಾಗೆ ಮಲೆಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ರೆಚೆಲ್ ಕನ್ನಡಕ್ಕೆ ಆಗಮಿಸಿದ್ದದ್ದು ಲವ್ ಮಾಕ್ಟೈಲ್ ಸಿನಿಮಾ ಮೂಲಕ. ಆ ನಂತರದಲ್ಲಿ ಒಂದಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಅನ್‌ಲಾಕ್ ರಾಘವ ಚಿತ್ರದ ಬೆನ್ನಲ್ಲಿಯೇ ರೆಚೆಲ್ ನಾಯಕಿಯಾಗಿರೋ ಮತ್ತೊಂದು ಚಿತ್ರವೂ ಬಿಡುಗಡೆಗೆ ತಯಾರಾಗಿದೆ. ಇದನ್ನೂ ಓದಿ: ಅನ್ ಲಾಕ್ ರಾಘವನ ಬಗ್ಗೆ ನಿರ್ಮಾಪಕ ಮಂಜುನಾಥ್ ಹೇಳಿದ್ದಿಷ್ಟು!
ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲವಿತ್ ಛಾಯಾಗ್ರಹಣ, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ನಿರ್ದೇಶನ, ಅನೂಪ್ ಸಿಳೀನ್ ಸಂಗೀತ, ಅಜಯ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಇದರೊಂದಿಗೆ ಹೊಸ ಪ್ರತಿಭೆ ಮಿಲಿಂದ್ ಗೌತಮ್ ನಾಯಕನಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳು ದಟ್ಟವಾಗಿಯೇ ಕಾಣಿಸುತ್ತಿವೆ. ಮಿಲಿಂದ್ ಮತ್ತು ರೆಚೆಲ್ ಜೋಡಿ ಮೆಲ್ಲಗೆ ಕ್ರೇಜ್ ಮೂಡಿಸುತ್ತಿದೆ.