ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಮೇಲೆ ಹಲ್ಲೆ ಮಾಡಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಇಡೀ ಬಿಟೌನ್ ದಂಗಾಗಿದೆ. ಆದರೆ ಯಾರೊಬ್ಬರೂ ಬೆಂಬಲಕ್ಕೆ ಬಂದಿರಲಿಲ್ಲ. ಆದರೆ ಬಾಲಿವುಡ್ ಫೈಯರ್ ಬ್ರ್ಯಾಂಡ್ ನಟಿ ಎಂದು ಗುರುತಿಸಿಕೊಂಡಿರುವ ಕಂಗನಾ ರಾಣಾವತ್ (Kangana Ranaut) ಬೆಂಬಲ ಸೂಚಿಸಿ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ. ರವೀನಾ ಮೇಲೆ ವಾಗ್ಯುದ್ಧ-ಹಲ್ಲೆ, ದಾಳಿಗೆ ಯತ್ನಿಸಿರುವ ಘಟನೆಯನ್ನ ಕಂಗನಾ ಕಟುವಾಗಿ ಖಂಡಿಸಿದ್ದಾರೆ.
Advertisement
ಇನ್ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ ‘ರವೀನಾ ಅವರ ಮೇಲೆ ಹೀಗಾಗಿರೋದು ಖಂಡಿತವಾಗಿ ಆತಂಕಕಾರಿ. ಎದುರಿನ ಗುಂಪಿನಲ್ಲಿ ಇನ್ನೂ ಏನಾದ್ರೂ ಐದಾರು ಜನ ಹೆಚ್ಚು ಇದ್ದಿದ್ರೆ ರವೀನಾರನ್ನ ಹತ್ಯೆ ಮಾಡಿಬಿಡುತ್ತಿದ್ದರು. ಇಂತಹ ರಸ್ತೆ ಆಕ್ರೋಶದ ಪ್ರಕೋಪಗಳನ್ನು ನಾನು ಖಂಡಿಸುತ್ತೇನೆ. ಅಂತಹ ಜನರಿಗೆ ಛೀಮಾರಿ ಹಾಕಬೇಕು. ಹಿಂಸಾತ್ಮಕ ಹಾಗೂ ವಿಷಕಾರಿ ನಡವಳಿಕೆ ಮಾಡಿದವರು ತಪ್ಪಿಸಿಕೊಳ್ಳಬಾರದು’ ಹೀಗಂತ ಬರೆದು ರವೀನಾ ಮೇಲಿನ ಘಟನೆಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ `ಕ್ವೀನ್’ ನಟಿ.
Advertisement
Advertisement
ಶನಿವಾರ ರಾತ್ರಿ ಮುಂಬೈನ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ರವೀನಾ ಟಂಡನ್ ಹಾಗೂ ಚಾಲಕನ ಮೇಲೆ ಜನರ ಗುಂಪು ದುರ್ವರ್ತನೆ ತೋರಿರುವ ವೀಡಿಯೋ ವೈರಲ್ ಆಗಿತ್ತು. ಪುರುಷರೂ ಸೇರಿದಂತೆ ಮೂವರು ಮಹಿಳೆಯರು ರವೀನಾ ಮೇಲೆ ಹಲ್ಲೆ ಮಾಡಿದ್ರು. ಜೊತೆಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂಬುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ರವೀನಾ ಕಾರ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರು ಚಾಲಕ ಮಹಿಳೆಯೊಬ್ಬರಿಗೆ ಗುದ್ದಿದ್ದಾರೆ ಎನ್ನಲಾಗುತ್ತೆ. ಹೀಗಾಗಿ ಮಹಿಳೆಯ ಜೊತೆಗಾರರು ಸೇರಿ ಚಾಲಕನಿಗೆ ಥಳಿಸಲಾರಂಭಿಸಿದ್ರು. ಹೀಗಾಗಿ ರವೀನಾ ಕೆಳಕ್ಕಿಳಿದು ಅದನ್ನ ತಡೆಯಲು ಯತ್ನಿಸಿದ್ರು. ಈ ವೇಳೆ ರವೀನಾ ಮೇಲೂ ಹಲ್ಲೆ ಮಾಡಿದ್ದಾರೆ.
Advertisement
ರವೀನಾ ಅಂಗಲಾಚಿದರೂ ಬಿಡದೆ ನಿರಂತರ ಬೈಗುಳ ಮುಂದುವರೆಸುತ್ತಾ ಹಲ್ಲೆ ಮಾಡಿದ್ರು ಅನ್ನೋದು ವೈರಲ್ ಆಗಿರುವ ವೀಡಿಯೋದಲ್ಲಿ ಕಂಡುಬರುತ್ತದೆ. ಸೆಲೆಬ್ರಿಟಿ ಹೊರತಾಗಿಯೂ ಮಾನವೀಯತೆ ಆಧಾರದ ಮೇಲೂ ರವೀನಾ ಮೇಲಿನ ಈ ಘಟನೆಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ. ಈ ಹಿನ್ನೆಲೆ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ. ಇಬ್ಬರಿಂದಲೂ ಹೇಳಿಕೆ ಬರೆಸಿಕೊಳ್ಳಲಾಗಿದೆ.
ಘಟನೆ ಬಳಿಕ ರವೀನಾ ಕೂಡ ಎಲ್ಲಿಯೂ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ವೈರಲ್ ವೀಡಿಯೋ ಆಧಾರವಾಗಿಟ್ಟುಕೊಂಡು ಕಂಗನಾ ಮಾತ್ರ ಕಡು ಕೋಪ ತೋರಿಸಿದ್ದಾರೆ. ಇನ್ನೂ ಐದಾರು ಜನ ಹೆಚ್ಚಿಗೆ ಸೇರಿದ್ದರೆ ರವೀನಾ ಹತ್ಯೆ ಮಾಡ್ತಿದ್ದರು ಎಂಬ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ ಮಂಡಿ ಕ್ಷೇತ್ರ ಗೆಲ್ಲುವ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಕಂಗನಾ.