ಡಾಲಿ ಸಿನಿಮಾಗೆ ವಿಶ್ ಮಾಡಿ, ತೆಲುಗು ಚಿತ್ರ ನೋಡುತ್ತೇನೆ ಎಂದ ರಶ್ಮಿಕಾ ಮಂದಣ್ಣ

Public TV
2 Min Read
RASHMIKA MANDANNA 1 2

ನ್ನಡದ `ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸದಾ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿರುವ ರಶ್ಮಿಕಾ ಇದೀಗ ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಡಾಲಿ `ಹೊಯ್ಸಳ’ (Hoysala) ಚಿತ್ರಕ್ಕೆ ವಿಶ್ ಮಾಡಿ, ನಾನಿ ನಟನೆಯ `ದಸರಾ’ (Dasara) ತೆಲುಗು ಸಿನಿಮಾ ನೋಡುತ್ತೇನೆ ಎಂದು ನಟಿ ಹೇಳಿರೋದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

Rashmika Mandanna 1 1

ರಕ್ಷಿತ್ ಶೆಟ್ಟಿ (Raskshit Shetty) ಸಿನಿಮಾಗೆ ನಾಯಕಿಯಾಗುವ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ರಶ್ಮಿಕಾ, ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಗಮನ ಸೆಳೆಯುತ್ತಿದ್ದಾರೆ. ಸದ್ಯ ಕನ್ನಡ ಮತ್ತು ತೆಲುಗು ಚಿತ್ರಕ್ಕೆ ನಟಿ ವಿಶ್ ಮಾಡಿರುವ ರೀತಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಹಿರಿಯ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

Rashmika Mandanna 2

ಡಾಲಿ-ಅಮೃತಾ ನಟನೆಯ `ಹೊಯ್ಸಳ’ ಸಿನಿಮಾದ 17 ಸೆಕೆಂಡ್‌ನ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಹಂಚಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಧನಂಜಯ್ ಅನ್ನು ಟ್ಯಾಗ್ ಮಾಡಿ `ಹೊಯ್ಸಳ’ ಸಿನಿಮಾಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ. ಅದೇ ಪೋಸ್ಟ್ ಅನ್ನು ನಿರ್ಮಾಪಕ ವಿಜಯ್ ಕಿರಗಂದೂರು, ನಾಯಕಿ ಅಮೃತಾ ಐಯ್ಯಂಗಾರ್, ಕೆಆರ್‌ಜಿ ಸ್ಟುಡಿಯೋಸ್, ನಿರ್ದೇಶಕ ವಿಜಯ್, ಕಾರ್ತಿಕ್ ಗೌಡ, ನಿರ್ಮಾಪಕ ಯೋಗಿರಾಜು, ಸಿನಿಮಾಟೊಗ್ರಾಫರ್ ಕಾರ್ತಿಕ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಆನಂದ್ ಆಡಿಯೋ ಅನ್ನು ಸಹ ಟ್ಯಾಗ್ ಮಾಡಿದ್ದಾರೆ.

RASHMIKA MANDANNA 7

`ಹೊಯ್ಸಳ’ ಸಿನಿಮಾಕ್ಕೆ ಶುಭ ಹಾರೈಸಿ ಸ್ಟೋರಿ ಹಾಕಿರುವ ಜೊತೆಗೆ ನಾಳೆ `ಹೊಯ್ಸಳ’ ಸಿನಿಮಾದ ಜೊತೆಗೇ ಬಿಡುಗಡೆ ಆಗುತ್ತಿರುವ ತೆಲುಗು ಸಿನಿಮಾ ದಸರಾ ಬಗ್ಗೆಯೂ ಸ್ಟೋರಿ ಹಾಕಿದ್ದಾರೆ. ನಾನಿ, ಕೀರ್ತಿ ಸುರೇಶ್, ದೀಕ್ಷಿತ್ ಶೆಟ್ಟಿ ಹಾಗೂ ಇಡೀ ದಸರಾ ಚಿತ್ರತಂಡಕ್ಕೆ ದೊಡ್ಡ ಚಪ್ಪಾಳೆ. ನಿಮ್ಮೆಲ್ಲರಿಗೂ ನನ್ನ ಕಡೆಯಿಂದ ಶುಭ ಹಾರೈಕೆಗಳು. ಸಿನಿಮಾದ ಪೋಸ್ಟರ್ ಸಖತ್ ಆಗಿದೆ ಆಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಕಾತರಳಾಗಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನಟ ನಾನಿ, ಕೀರ್ತಿ ಸುರೇಶ್ ಹಾಗೂ ಕನ್ನಡಿಗರಾಗಿರುವ ದೀಕ್ಷಿತ್‌ಗೆ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದಾರೆ. ಮಾ.30ರಂದು ʻಹೊಯ್ಸಳʼ ಮತ್ತು ʻದಸರಾʼ ತೆರೆಕಂಡಿದೆ.

rashmika

ಕನ್ನಡ ಸಿನಿಮಾಗಿಂತ ತೆಲುಗು ಚಿತ್ರರಂಗದಲ್ಲಿಯೇ ರಶ್ಮಿಕಾ ಮಂದಣ್ಣ ಗುರುತಿಸಿಕೊಂಡಿರುವ ಕಾರಣ. ತುಸು ತೆಲುಗು ಸಿನಿಮಾ ಮೇಲೆಯೇ ಪ್ರೀತಿ, ಕಾಳಜಿಯನ್ನ ರಶ್ಮಿಕಾ ತೋರಿಸಿದ್ದಾರೆ. ನಟಿಯ ಈ ನಡೆಯೇ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Share This Article