ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಫೈನಲ್?‌

Public TV
1 Min Read
rashmika mandanna 6

ನ್ನಡತಿ ರಶ್ಮಿಕಾ ಮಂದಣ್ಣ(Rashmika Mandanna) ಅವರು ಸದ್ಯ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ 3 ಸಿನಿಮಾಗಳನ್ನು ಮಾಡಿದ್ದಾರೆ. ‘ಅನಿಮಲ್’ ಸಿನಿಮಾ ರಿಲೀಸ್‌ಗೂ ಮುನ್ನವೇ ಕಿರಿಕ್ ನಟಿ ರಶ್ಮಿಕಾ ಬಾಲಿವುಡ್‌ನ ಮತ್ತೊಂದು ಬಿಗ್ ಆಫರ್‌ನ ಬಾಚಿಕೊಂಡಿದ್ದಾರೆ. ಮರಾಠ ಸಾಮ್ರಾಜ್ಯದ ಮಹಾರಾಣಿಯಾಗಿ ರಶ್ಮಿಕಾ ಬರುತ್ತಿದ್ದಾರೆ.

Rashmika Mandanna 2

ಗುಡ್ ಬೈ, ಮಿಷನ್ ಮಜ್ನು (Mission Majnu) ಚಿತ್ರಗಳು ಸದ್ದು ಮಾಡದೇ ಇದ್ದರೂ ರಶ್ಮಿಕಾ ನಟನೆ ಅಭಿಮಾನಿಗಳ ಸೆಳೆಯಿತು. ತಮ್ಮ ಮೊದಲ ಚಿತ್ರದಲ್ಲೇ ಬಿಗ್ ಬಿ ಮಗಳ ಪಾತ್ರದಲ್ಲಿ ನಟಿಸುವ ಬಂಪರ್ ಚಾನ್ಸ್ ಪಡೆದರು. ಇದೀಗ ಸೌತ್- ಬಾಲಿವುಡ್ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ನ ಮತ್ತೊಂದು ಅದ್ದೂರಿ ಸಿನಿಮಾಗೆ ನಟಿ ಸೆಲೆಕ್ಟ್ ಆಗಿದ್ದಾರೆ.

rashmika mandanna 1 4

ಮಹಾ ಪರಾಕ್ರಮಿ ಛತ್ರಪತಿ ಶಿವಾಜಿ (Chatrapathi Shivaji) ಮಗ ಸಂಭಾಜಿ (Sambhaji) ಅವರ ಜೀವನ ಚರಿತ್ರೆಯನ್ನ ಸಿನಿಮಾ ಮಾಡಲು ಬಾಲಿವುಡ್‌ನಲ್ಲಿ ಪ್ಲ್ಯಾನ್‌ ಮಾಡಿದ್ದಾರೆ. ಸಂಭಾಜಿ ಪಾತ್ರದಲ್ಲಿ ವಿಕ್ಕಿ ಕೌಶಲ್ (Vicky Kaushal) ನಟಿಸಿದ್ದರೆ, ಅವರ ಪತ್ನಿ ಯೇಸುಭಾಯಿ ಬೋಸ್ಲೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಅವರನ್ನ ಸೆಲೆಕ್ಟ್ ಮಾಡಲಾಗಿದೆಯಂತೆ. ಈಗಾಗಲೇ ಯೇಸುಭಾಯಿ ಪಾತ್ರಕ್ಕೆ ರಶ್ಮಿಕಾ ತಯಾರಿ ಕೂಡ ನಡೆಸುತ್ತಿದ್ದಾರಂತೆ.‌ ಇದನ್ನೂ ಓದಿ:ಬಿಗ್ ಆಫರ್ ನೀಡಿದ ಕಿರಣ್ ರಾಥೋಡ್ : ಫೋಟೋ, ವಿಡಿಯೋಗೆ ಇಂತಿಷ್ಟು ರೇಟು

vikki kaushal

ಸಂಭಾಜಿ ಬೇರೆ ರಾಜ್ಯಗಳಿಗೆ ದಂಡೆತ್ತಿ ಹೋದಾಗ ಯೇಸುಭಾಯಿ ಮರಾಠ ಸಾಮ್ರಾಜ್ಯವನ್ನ ಹೇಗೆ ನಿಭಾಯಿಸುತ್ತಿದ್ದರು. ಅವರು ನಿರ್ಧಾರ ಹೇಗೆ ಕೈಗೊಳ್ಳುತ್ತಿದ್ದರು ಎಂದು ತೋರಿಸಲಾಗುತ್ತದೆ. ಈ ಸಿನಿಮಾವನ್ನ ‘ಚಾವʼ (Chhava Film) ಎಂಬ ಟೈಟಲ್ ಅಡಿಯಲ್ಲಿ ನಿರ್ಮಾಣ ಮಾಡುವ ಪ್ಲ್ಯಾನ್ ನಡೆಯುತ್ತಿದೆ. ಈ ಹಿಂದೆ ಜಾಹೀರಾತೊಂದರಲ್ಲಿ ವಿಕ್ಕಿ- ರಶ್ಮಿಕಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಜೋಡಿ ಹೇಗೆ ಕಮಾಲ್ ಮಾಡಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಎಲ್ಲದ್ದಕ್ಕೂ ಅಧಿಕೃತ ಅಪ್‌ಡೇಟ್‌ಗಾಗಿ ಕಾದುನೋಡಬೇಕಿದೆ.

Share This Article