ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ‘ಕುಬೇರ’ ಸಿನಿಮಾದ ಮೂಲಕ ಸದ್ದು ಮಾಡ್ತಿದ್ದಾರೆ. ಧನುಷ್ (Dhanush) ನಟನೆಯ ‘ಕುಬೇರ’ ಸಿನಿಮಾದಲ್ಲಿನ ರಶ್ಮಿಕಾ ಪಾತ್ರದ ಲುಕ್ ಈಗ ರಿವೀಲ್ ಆಗಿದೆ. ವಿಭಿನ್ನ ಗೆಟಪ್‌ನಲ್ಲಿ ನಟಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:’ಪೆನ್ ಡ್ರೈವ್’ ಸಿನಿಮಾದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ತನಿಷಾ ಕುಪ್ಪಂಡ
ರಶ್ಮಿಕಾ ಫಸ್ಟ್ ಲುಕ್ ಜೊತೆಗೆ ಕ್ಯಾರೆಕ್ಟರ್ ಗ್ಲಿಂಪ್ಸ್ ಕೂಡ ಚಿತ್ರತಂಡ ರಿವೀಲ್ ಮಾಡಿದೆ. ಒಂದು ನಿಮಿಷದಲ್ಲಿರುವ ಈ ವಿಡಿಯೋದಲ್ಲಿ ನಟಿಯ ಪಾತ್ರದ ಝಲಕ್ ಇದೆ. ರಾತ್ರೋ ರಾತ್ರಿ ದುಡ್ಡಿನ ಸೂಟ್ ಕೇಸ್ ಹಿಡಿದು ರಶ್ಮಿಕಾ ಬರುತ್ತಿರುವ ದೃಶ್ಯ ತೋರಿಸಲಾಗಿದೆ. ಚಿತ್ರದ ಫಸ್ಟ್ ಲುಕ್‌ಗೆ ಇದೀಗ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.
View this post on Instagram
ಫಸ್ಟ್ ಲುಕ್‌ನಲ್ಲಿ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಇನ್ನಷ್ಟು ಕಿಕ್ ಕೊಡುವಂತಿದೆ. ಡೈರೆಕ್ಟರ್ ಶೇಖರ್ ಕಮ್ಮುಲ ಅವರ ‘ಕುಬೇರ’ (Kubera) ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಸದ್ಯ ಈ ಹೈ ಬಜೆಟ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಅಂದಹಾಗೆ, ಈ ಸಿನಿಮಾದಲ್ಲಿ ಧನುಷ್‌ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.