ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮುಗ್ಧ ಹುಡುಗರಿಗೆ ‘ವಾಟ್ ದಿ ಎಫ್’ ಹಾಡು ನೋಡಲು ಸಲಹೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ತೆಲುಗಿನ ‘ಗೀತಾ ಗೋವಿದಂ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದ್ದು, ರಶ್ಮಿಕಾ ಈ ಹಾಡನ್ನು ನೋಡಿ ಎಂದು ತಮ್ಮ ಟ್ಟಿಟ್ಟರಿನಲ್ಲಿ ವಿಡಿಯೋ ಹಾಕುವ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
Advertisement
ರಶ್ಮಿಕಾ ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋ ಹಾಕಿ “ವಾಟ್ ದಿ ಎಫ್ ಹಾಡು ಬಿಡುಗಡೆಯಾಗಿದೆ. ನಾನು ಈ ಹಾಡಿನ ಪ್ರಚಾರ ಮಾಡಬೇಕು. ಏಕೆಂದರೆ ಇದು ನನ್ನ ಚಿತ್ರ. ನಾನು ಮತ್ತೇನು ಮಾಡಲು ಆಗುವುದಿಲ್ಲ. ಎಲ್ಲ ಮುಗ್ಧ ಹುಡುಗರೇ ಈ ಹಾಡನ್ನು ನೋಡಿ ಹಾಗೂ ಎಲ್ಲ ಮಹಿಳೆಯರೇ ನಾವು ಈ ರೀತಿಯ ಹಾಡನ್ನು ಬರೆಯಬೇಕು” ಎಂದು ಟ್ವೀಟ್ ಮಾಡಿದ್ದಾರೆ.
Advertisement
ವಾಟ್ ದಿ ಎಫ್ ಹಾಡನ್ನು ಬಾಲಿವುಡ್ ಗಾಯಕರಾದ ಅರ್ಜಿತ್ ಸಿಂಗ್ ಹಾಗೂ ಸೋನಂ ನಿಗಮ್ ಹಾಡಬೇಕಿತ್ತು. ಆದರೆ ಅವರು ಸಿಗಲಿಲ್ಲ ಎಂಬ ಕಾರಣಕ್ಕೆ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಹಾಡನ್ನು ನೀನು ಹಾಡು ಎಂದು ಹೇಳಿದ್ದರು. ಹಾಗಾಗಿ ನಾನು ಈ ಹಾಡು ಹಾಡುತ್ತಿದ್ದೇನೆ ಎಂದು ನಟ ವಿಜಯ್ ದೇವರಕೊಂಡ ವಿಡಿಯೋದಲ್ಲಿ ತಿಳಿಸಿದ್ದಾರೆ.
Advertisement
???????? ok ‘What the F’ song is out.. ???????? I have to promote this song.. because this is my film..????????♀️what to do..???? all “innocent boys” go watch..????and all the ladies.. we should also write a song on how annoying these guys are re..???????? https://t.co/Xl8zJ2WLj5
— Rashmika Mandanna (@iamRashmika) July 26, 2018
Advertisement
ಗೀತಾ ಗೋವಿದಂ ಚಿತ್ರದಲ್ಲಿ ರಶ್ಮಿಕಾಗೆ ನಾಯಕನಾಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ಮೊದಲನೇ ಹಾಡು ಯೂಟ್ಯೂಬ್‍ನಲ್ಲಿ ಸಾಕಷ್ಟು ಹಿಟ್ ಆಗಿದ್ದು, ಹಾಡು ಇದುವರೆಗೂ 23.45 ಲಕ್ಷ ವ್ಯೂ ಪಡೆದಿದೆ.
ಸಿನಿಮಾದ ಟೀಸರ್ ಬಿಡುಗಡೆಯಾದ 7 ಗಂಟೆಯಲ್ಲಿ 14 ಲಕ್ಷ ವ್ಯೂ ಆಗಿದ್ದು, ನಂ.1 ಟ್ರೆಂಡಿಂಗ್ ನಲ್ಲಿತ್ತು. ಈಗ ಈ ಟೀಸರ್ 55 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದೆ. ಕನ್ನಡದ ವರನಟ ರಾಜ್‍ಕುಮಾರ್ ಅವರ ಎಂದೆಂದೂ ನಿನ್ನನು ಮರೆತು ನಾನಿರಲಾರೆ ಹಾಡಿನ ತೆಲುಗು ಟ್ಯೂನ್‍ನೊಂದಿಗೆ ಟೀಸರ್ ಆರಂಭವಾಗಿದೆ.
ಸದ್ಯ ಈ ಚಿತ್ರವನ್ನು ಪರುಶರಾಮ್ ನಿರ್ದೇಶನ ಮಾಡಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಲಿರಿಕಲ್ ವಿಡಿಯೋ ಸಾಂಗ್ ಮೂಲಕವೇ ಈ ಹಾಡು ಸಾಕಷ್ಟು ವೈರಲ್ ಆಗಿದೆ. ಸದ್ಯ ಈ ಸಿನಿಮಾ ರಶ್ಮಿಕಾ ಅವರ ಎರಡನೇ ತೆಲುಗು ಸಿನಿಮಾ ಆಗಿದ್ದು, ಇದೇ ಆಗಸ್ಟ್ 15ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
https://www.youtube.com/watch?v=T4imX7yFgY0