ಚಿತ್ರರಂಗದ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈ ವರ್ಷದ ಶುರುವಿನಲ್ಲಿಯೇ ಡಬಲ್ ಧಮಾಕಾ ಎನ್ನುವಂತೆ `ವಾರಿಸು’ (Varisu) ಮತ್ತು `ಮಿಷನ್ ಮಜ್ನು’ (Mission Majnu) ಸಿನಿಮಾಗಳ ಮೂಲಕ ಮೋಡಿ ಮಾಡಿದ್ದಾರೆ. ಇತ್ತೀಚಿನ `ವಾರಿಸು’ ಚಿತ್ರದಲ್ಲಿ ತನ್ನ ಪಾತ್ರಕ್ಕೆ ತೂಕವಿಲ್ಲದಿದ್ರು ಈ ಚಿತ್ರವನ್ನ ರಶ್ಮಿಕಾ ಒಪ್ಪಿಕೊಂಡಿದ್ದು ಯಾಕೆ ಎಂಬುದನ್ನ ರಿವೀಲ್ ಮಾಡಿದ್ದಾರೆ.
Advertisement
ಸಿನಿಮಾ ನಗರಿಯಲ್ಲಿ ಸದ್ಯ ರಶ್ಮಿಕಾ ಮಂದಣ್ಣ ಅವರದ್ದೇ ಹವಾ. ಆಲ್ ಮೋಸ್ಟ್ ಎಲ್ಲಾ ಸ್ಟಾರ್ ನಟರಿಗೂ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಷ್ಟೇಲ್ಲಾ ಬೇಡಿಕೆಯಿರುವ ನಟಿ ರಶ್ಮಿಕಾ ದಳಪತಿ ವಿಜಯ್ ನಟನೆಯ ʻವಾರಿಸುʼ ಸಿನಿಮಾದಲ್ಲಿ ಪಾತ್ರಕ್ಕೆ ತೂಕವಿಲ್ಲ ಎಂದ್ರು ಯಾಕೆ ನಟಿಸಿದ್ರು ಎಂಬುದನ್ನ ಇತ್ತೀಚಿನ ಸಂದರ್ಶನದಲ್ಲಿ ರಶ್ಮಿಕಾ ಕಾರಣವನ್ನ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ
Advertisement
Advertisement
ಈ ಚಿತ್ರವನ್ನು ನಾನೇ ಆಯ್ಕೆ ಮಾಡಿಕೊಂಡಿದ್ದು. ನನಗೆ ಗೊತ್ತಿತ್ತು ಈ ಸಿನಿಮಾದಲ್ಲಿ ನನಗಿರೋದು ಕೇವಲ ಎರಡು ಹಾಡುಗಳು ಮಾತ್ರ ಅಂತ. ಅದರಲ್ಲೇ ನಾನು ಗಮನ ಸೆಳೆಯಬೇಕು ಎಂದುಕೊಂಡಿದ್ದೆ. ನಾನು ವಿಜಯ್ ಅವರ ಬಳಿ ಈ ಮಾತನ್ನು ಹೇಳಿದ್ದೆ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
Advertisement
ನನಗೆ ವಿಜಯ್ (Vijay) ಅವರ ಜೊತೆ ನಟಿಸಬೇಕು ಎಂದಿತ್ತು. ಅವರು ನನಗೆ ಮೊದಲಿನಿಂದಲೂ ಅಚ್ಚುಮೆಚ್ಚು. ಹೀಗಾಗಿ ನಾನು ಈ ಚಿತ್ರವನ್ನು ಒಪ್ಪಿಕೊಂಡೆ. ಓರ್ವ ಕಲಾವಿದೆಯಾಗಿ ಸೆಟ್ಗೆ ಹೋಗುವುದು ಮತ್ತು ಅಲ್ಲಿ ಕೆಲಸ ಮಾಡುತ್ತಿರುವವರಿಂದ ಸಣ್ಣ ವಿಷಯಗಳನ್ನು ಕಲಿತುಕೊಳ್ಳುವುದು ಮುಖ್ಯ. ನನಗೆ ಒಂದೇ ರೀತಿಯ ಪಾತ್ರಗಳಿಗೆ ಫಿಕ್ಸ್ ಆಗಲು ಇಷ್ಟವಿಲ್ಲ ಎಂದು ನಟಿ ರಶ್ಮಿಕಾ ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k