ಫಸ್ಟ್ ಲವ್ ಬಿಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ

Public TV
1 Min Read
Rashmika Mandanna

ಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಇದೀಗ ಮತ್ತೊಂದು ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಧನುಷ್ ಜೊತೆ ನಟಿಸಿರುವ ಕುಬೇರ ಸಿನಿಮಾ ಬಾಕ್ಸ್ ಆಫೀಸ್ ಅಲ್ಲಾಡಿಸಿದೆ. ಕೇವಲ ತಮಿಳಿನಲ್ಲಿ ಮಾತ್ರವಲ್ಲ, ನಾನಾ ಭಾಷೆಗಳಲ್ಲಿ ಬಿಡುಗಡೆಯಾಗಿ ಅಷ್ಟೂ ಕಡೆ ಗೆಲುವಿನ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ತಮ್ಮ ಫಸ್ಟ್ ಲವ್ ಬಗ್ಗೆ ಮಾತಾಡಿದ್ದಾರೆ ರಶ್ಮಿಕಾ.

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದವರು ರಶ್ಮಿಕಾ, ಆ ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಿ, ಹಿರಿಯರ ಒಪ್ಪಿಗೆ ಪಡೆದುಕೊಂಡೇ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ, ಆ ಬಾಂಧವ್ಯ ತೀರಾ ದಿನ ಉಳಿಯಲಿಲ್ಲ. ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿಕೊಂಡು ಬೇರೆ ಚಿತ್ರರಂಗಕ್ಕೆ ಹಾರಿದ್ದರು ರಶ್ಮಿಕಾ. ಹಾಗಾಗಿ ಇವರ ಫಸ್ಟ್ ಲವ್ ಕಿರಿಕ್ ಪಾರ್ಟಿಯಿಂದ ಶುರುವಾಗಿತ್ತು ಎಂದೇ ನಂಬಲಾಗಿತ್ತು. ಅದು ಸುಳ್ಳು ಅಂದಿದ್ದಾರೆ ರಶ್ಮಿಕಾ ಮಂದಣ್ಣ.

ಕುಬೇರ ಇವೆಂಟ್ ವೇದಿಕೆಯಲ್ಲಿ ಫಸ್ಟ್ ಲವ್ ಬಗ್ಗೆ ಮಾತಾಡಿರುವ ರಶ್ಮಿಕಾ, ಶಾಲಾ ದಿನಗಳಲ್ಲೇ ಫಸ್ಟ್ ಲವ್ ಆಗಿತ್ತು. ಮೊದಲ ಪ್ರೇಮ ಪತ್ರವನ್ನು ಅಲ್ಲಿಯೇ ಸ್ವೀಕರಿಸಿದ್ದೆ ಎಂದಿದ್ದಾರೆ. ಅಲ್ಲದೇ ಮೊದಲ ಬಾರಿಗೆ ಯಾವ ಕಾರನ್ನು ಖರೀದಿಸಿದೆ ಅಂತಾನೂ ಹೇಳಿದ್ದಾರೆ. ಈ ಮೂಲಕ ಫಸ್ಟ್ ಲವ್, ಫಸ್ಟ್ ಕಾರು ಬಗ್ಗೆ ಯಾವತ್ತಿಗೂ ಕ್ರೇಜ್ ಇರತ್ತೆ ಅಂತಾನೂ ತಿಳಿಸಿದ್ದಾರೆ.

Share This Article