‌’ದಿ ಗರ್ಲ್‌ಫ್ರೆಂಡ್’ ಸಿನಿಮಾ ಏನಾಯ್ತು?- ಕೊನೆಗೂ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ರು ರಶ್ಮಿಕಾ

Public TV
2 Min Read
rashmika mandanna 1 4

ಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ (The Girlfriend) ಬಗ್ಗೆ ಏನು ಅಪಡೇಟ್ ಸಿಗದಿರೋ ಹಿನ್ನೆಲೆ ಫ್ಯಾನ್ಸ್ ಬೇಸರಗೊಂಡಿದ್ದಾರೆ. #ReleaseTheGirlfriend ಅಂತ ಎಕ್ಸ್‌ನಲ್ಲಿ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡಿಂಗ್ ಮಾಡೋ ಮೂಲಕ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡಿ ಎಂದು ಶ್ರೀವಲ್ಲಿ ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ. ಅದಕ್ಕೀಗ ರಶ್ಮಿಕಾ ಕಡೆಯಿಂದ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ರಶ್ಮಿಕಾರಲ್ಲಿ ದೇವರಕೊಂಡಗೆ ಪತ್ನಿಯಾಗುವ ಗುಣವಿದ್ಯಾ?- ನಟ ಹೇಳೋದೇನು?

Rashmika Mandanna 4‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಏನಾಯ್ತು ಎಂದು ಕಾತರದಿಂದ ಕಾಯುತ್ತಿದ್ದ ಫ್ಯಾನ್ಸ್ ರಶ್ಮಿಕಾ ರಿಯಾಕ್ಟ್ ಮಾಡಿದ್ದಾರೆ. ಹಾಯ್ ಮೈ ಲವ್ಲಿಸ್, ನಾನು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೇನೆ ಎಂದು ತಿಳಿದಿದ್ದೇನೆ. ಖಂಡಿತವಾಗಿಯೂ ನಿಮ್ಮ ಕಾಯುವಿಕೆಯನ್ನು ನಿರಾಸೆ ಮಾಡಲ್ಲ. ನಿಮಗೆ ಅತ್ಯುತ್ತಮ ಔಟ್‌ಪುಟ್ ನೀಡಲು ಕೆಲಸ ಮಾಡುತ್ತಿದ್ದೇವೆ. ವಿಶೇಷ ಸಿನಿಮಾಗಳಲ್ಲಿ ಇದು ಕೂಡ ಒಂದಾಗಿದೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಸಿನಿಮಾ ಗೆದ್ದ ಬೆನ್ನಲ್ಲೇ ದೇವಿ ಮೊರೆ ಹೋದ ಶ್ರೀನಿಧಿ ಶೆಟ್ಟಿ

ಇದು ಹೆಚ್ಚು ಮಾತನಾಡದ ವಿಷಯಗಳ ಮಾತನಾಡುವ ಚಿತ್ರವಿದು. ಶುದ್ಧ ಪಾತ್ರಗಳನ್ನು ಆಧರಿಸಿದ ಸಿನಿಮಾವಿದು, ಇದೇ ಸಿನಿಮಾದ ಬ್ಯೂಟಿ ಆಗಿದೆ ಎಂದು ನಟಿ ಬಣ್ಣಿಸಿದ್ದಾರೆ. ನಿಮ್ಮೆಲ್ಲರಿಗೂ ಅತ್ಯುತ್ತಮವಾಗಿರೋದನ್ನು ನೀಡಲು ಬಯಸುತ್ತೇವೆ. ಸಿನಿಮಾ ಬಗ್ಗೆ ನಾವು ಭರವಸೆ ನೀಡುತ್ತೇವೆ. ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡೋದಾಗಿ ಹೇಳಿದ್ದಾರೆ.

rashmika mandanna latest saree photos 003

ಈ ಸಿನಿಮಾವನ್ನು ಅಲ್ಲು ಅರವಿಂದ್ ಅವರ ‘ಗೀತಾ ಆರ್ಟ್ಸ್’ ನಿರ್ಮಾಣ ಮಾಡಿದೆ. ಕನ್ನಡದ ದೀಕ್ಷಿತ್ ಶೆಟ್ಟಿ (Dheekshith Shetty) ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ಇದರಲ್ಲಿ ಇಬ್ಬರೂ ಕಾಲೇಜ್ ಸ್ಟುಡೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


‘ಪುಷ್ಪ 2’ ಸಕ್ಸಸ್ ಬಳಿಕ ಕುಬೇರ, ಥಾಮಾ, ಶಾಹಿದ್ ಕಪೂರ್ ಜೊತೆ ಕಾಕ್‌ಟೈಲ್ 2, ಅನಿಮಲ್ ಪಾರ್ಕ್ 2 ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿವೆ.

Share This Article