‘ಅನಿಮಲ್’ ಸಕ್ಸಸ್ ನಂತರ ಬ್ಯುಸಿಯಾಗಿರುವ ರಶ್ಮಿಕಾ ಈ ಚಿತ್ರವನ್ನು ಅರ್ಧಕ್ಕೆ ನಿಲ್ಲಿಸಿದ್ರಾ?

Public TV
2 Min Read
rashmika mandanna 1 3

ಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಸ್ಟಾರ್. ಹೀಗಾಗಿ ನಟಿಯ ಸಿಂಗಲ್ ಅವರ್ ಕಾಲ್‌ಶೀಟ್ ಪಡೆಯೋಕೆ ಕೋಟಿ ಕೋಟಿ ಕೊಡುತ್ತಿದ್ದಾರೆ. ಆದರೆ ಬಾಲಿವುಡ್‌ನಲ್ಲಿ ಸ್ಟಾರ್ ಆಗುವ ಮುನ್ನ ಒಪ್ಪಿಕೊಂಡಿದ್ದ ತೆಲುಗು ಚಿತ್ರವೊಂದು ಅರ್ಧಕ್ಕೆ ನಿಂತಿದೆ. ಕಾರಣ ರಶ್ಮಿಕಾ ಕೇಳುತ್ತಿರುವ ಕೋಟಿ ಕೋಟಿ ಸಂಭಾವನೆ. ಅದ್ಯಾವ ಚಿತ್ರಕ್ಕೆ ಅಡ್ಡಗಾಲು ಹಾಕಿದ್ದಾರೆ ರಶ್ಮಿಕಾ? ಇಲ್ಲಿದೆ ಅಸಲಿ ವಿಚಾರ.

rashmika mandanna 5

ಕೊಡಗಿನ ಕುವರಿ ರಶ್ಮಿಕಾ ಅಭಿನಯದ 2-3 ಹಿಂದಿ ಸಿನಿಮಾ ಆಕಾಶ ನೋಡಿದ್ದವು. ಮುಗಿಯಿತು ರಶ್ಮಿಕಾ ಬಾಲಿವುಡ್ ಕುಣಿತ ಎಂದುಕೊಂಡಿದ್ದರು ಅನೇಕರು. ಆದರೆ ರಣಬೀರ್ (Ranbir Kapoor) ಜೊತೆ ‘ಅನಿಮಲ್’ನಲ್ಲಿ (Animal) ಬೋಲ್ಡ್ ಆಗಿ ಅಭಿನಯಿಸಿದಾಗ ಅದೃಷ್ಟ ಖುಲಾಯಿಸಿದೆ. ರಶ್ಮಿಕಾ ಸದ್ಯಕ್ಕೆ 3ರಿಂದ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇದರ ನಡುವೆ ತೆಲುಗು ಸಿನಿಮಾವನ್ನು ರಶ್ಮಿಕಾ ಮಂದಣ್ಣ ಅರ್ಧಕ್ಕೆ ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಪುಷ್ಪ ಸಕ್ಸಸ್ ನಂತರ ಒಪ್ಪಿಕೊಂಡಿದ್ದ ತೆಲುಗಿನ ‘ರೇನ್‌ಬೋ’ (Rainbow) ಸಿನಿಮಾಗೆ ಡೇಟ್ಸ್ ಕೊಟ್ಟಿದ್ದರು. ಬಾಲಿವುಡ್‌ಗೆ ಹಾರಿದ ಮೇಲೆ ಇತ್ತ ಮುಖ ಹಾಕಲಿಲ್ಲ. ಇದನ್ನೂ ಓದಿ:ಚಿರಂಜೀವಿ ಜೊತೆ ನಟಿಸುವ ಬಂಪರ್ ಅವಕಾಶ ಕಳೆದುಕೊಂಡ ಸಮಂತಾ

rashmika mandanna 1

‘ರೈನ್‌ಬೋ’ ಸಿನಿಮಾ ಮೊದಲ ಹಂತದ ಶೂಟಿಂಗ್ ಮುಗಿದಿದೆ. 2ನೇ ಹಂತದ ಶೂಟಿಂಗ್ ಶುರು ಆಗಬೇಕಿದೆ. ‘ರೇನ್‌ಬೋ’ ಚಿತ್ರಕ್ಕೆ ತಮಿಳು ನಿರ್ದೇಶಕ ಶಾಂತರುಬಾನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಶೂಟಿಂಗ್ ಬಗ್ಗೆ ಯಾವುದೇ ಅಪ್‌ಡೇಟ್ ಕೂಡ ಬಂದಿಲ್ಲ. ರಶ್ಮಿಕಾ ಮಂದಣ್ಣ ಅವರು ಶೂಟ್‌ನಲ್ಲಿ ಭಾಗಿ ಆಗುತ್ತಿಲ್ಲ ಎನ್ನಲಾಗಿದೆ.

ಈ ಮೊದಲು ರಶ್ಮಿಕಾ ಈ ಚಿತ್ರಕ್ಕಾಗಿ ಹೆಚ್ಚಿನ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ ಎಂದು ವರದಿ ಆಗಿತ್ತು. ಇದಕ್ಕೆ ನಿರ್ಮಾಪಕರು ಒಪ್ಪಿಗೆ ಸೂಚಿಸಿದ್ದರು. ಇದರ ಜೊತೆಗೆ ಕಥೆಯಲ್ಲೂ ಕೆಲವು ಬದಲಾವಣೆ ಮಾಡೋಕೆ ಸೂಚಿಸಿದ್ದರು. ಆದರೆ, ಈ ಬಗ್ಗೆ ನಿರ್ದೇಶಕರು ಯಾವ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ವಿಚಾರ ಸ್ಪಷ್ಟವಾಗಿಲ್ಲ.

ಕೆಲದಿನಗಳ ಹಿಂದೆ ರಶ್ಮಿಕಾರ ಸಂಭಾವನೆ ಜಾಸ್ತಿ ಆಗಿದೆ. ಒಂದು ಚಿತ್ರಕ್ಕೆ 4ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಳಿಕ ದುಬಾರಿ ಸಂಭಾವನೆ ಪಡೆಯುತ್ತಿರುವುದು ಸುಳ್ಳು ಎಂದು ತಮ್ಮದೇ ಶೈಲಿನಲ್ಲಿ ರಶ್ಮಿಕಾ ಸ್ಪಷ್ಟನೆ ನೀಡಿದ್ದರು. ಇದೀಗ ರೈನ್‌ಬೋ ಸಿನಿಮಾ ಅರ್ಧಕ್ಕೆ ಕೈಬಿಟ್ಟಿರೋದು ನಿಜನಾ? ಎಂದು ಅವರೇ ಸ್ಪಷ್ಟನೆ ನೀಡಬೇಕಿದೆ.

Share This Article