ಕನ್ನಡದ `ಕಿರಿಕ್ ಪಾರ್ಟಿ’ (Kirik Party) ಮೂಲಕ ಪರಿಚಿತರಾದ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಸೌತ್ ಮತ್ತು ಬಾಲಿವುಡ್ನಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಮಿಂಚ್ತಿದ್ದಾರೆ. ಈಗ ಬಿಟೌನ್ ದುನಿಯಾಗೆ ಇಷ್ಟವಾಗುವ ಹಾಗೇ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ. ಕಿರಿಕ್ ಬ್ಯೂಟಿ ಹಾಟ್ ಲುಕ್ ಈಗ ಪಡ್ಡೆಹುಡುಗರ ನಿದ್ದೆಗೆಡಿಸಿದೆ.
ಲಕ್ಕಿ ನಟಿ ರಶ್ಮಿಕಾ ಸಕ್ಸಸ್ ಇತರೆ ನಟಿಯರಿಗೆ ತಲೆನೋವಾಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಡುತ್ತಾ ವೃತ್ತಿರಂಗದಲ್ಲಿ ರಶ್ಮಿಕಾ ಮಂದಣ್ಣ ಮುನ್ನುಗ್ಗುತ್ತಿದ್ದಾರೆ. ನಟಿಯ ಸಕ್ಸಸ್ ಕಣ್ಣುಕುಕ್ಕುವಂತಿದೆ. ಸ್ಟಾರ್ ನಟರಿರುವ ಬಿಗ್ ಬಜೆಟ್ ಚಿತ್ರಕ್ಕೆ ಈಗ ರಶ್ಮಿಕಾನೇ ನಾಯಕಿಯಾಗಬೇಕು ಎನ್ನುತ್ತಿದ್ದಾರೆ. ಸದ್ಯ ನಟಿ ರಶ್ಮಿಕಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿಗೆ ರಶ್ಮಿಕಾ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ನಟಿಯ ಕೈಯಲ್ಲಿರೋ ಪುಷ್ಪ 2, `ಅನಿಮಲ್’ (Animal) ಸಿನಿಮಾಗಳನ್ನು ಮಾಡಿ ಮುಗಿಸುವ ಲೆಕ್ಕಾಚಾರದಲ್ಲಿದ್ದಾರೆ. ಆಗಾಗ ಬಿಂದಾಸ್ ಫೋಟೊಶೂಟ್ಗಳಲ್ಲಿ ಮಿಂಚುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ವೆರೈಟಿ ವೆರೈಟಿ ಕಾಸ್ಟ್ಯೂಮ್ಗಳಲ್ಲಿ ಕಿರಿಕ್ ಬೆಡಗಿ ಕ್ಯಾಮೆರಾ ಮುಂದೆ ಕಣ್ಣರಳಿಸಿದ್ದಾರೆ.
View this post on Instagram
ಹೊಸ ಫೋಟೊಶೂಟ್ ಮೇಕಿಂಗ್ ಝಲಕ್ ಅನ್ನು ಇನ್ಸ್ಟಾಗ್ರಾಂನಲ್ಲಿ ರಶ್ಮಿಕಾ ಮಂದಣ್ಣ ಶೇರ್ ಮಾಡಿದ್ದಾರೆ. ರಶ್ಮಿಕಾಗೆ ಬಾಲಿವುಡ್ ನೀರು ಮೈಗತ್ತಿದಂತೆ ಕಾಣುತ್ತಿದೆ. ಅದಕ್ಕೆ ತಕ್ಕಂತೆ ಗ್ಲಾಮರ್ ಡೋಸ್ ಹೆಚ್ಚಿಸುತ್ತಾ ಹೋಗುತ್ತಿದ್ದಾರೆ. ಫೋಟೊಶೂಟ್ಗಳಲ್ಲಿ ಅದು ಗೊತ್ತಾಗುತ್ತಿದೆ. ರಶ್ಮಿಕಾ ಈಗ ಬಾಲಿವುಡ್ ಹೀರೋಯಿನ್ನೇ ಆಗಿಬಿಟ್ಟಿದ್ದಾರೆ. ಹಿಂದಿ ಸಿನಿಮಾ ಈವೆಂಟ್ಗಳಲ್ಲಿ ತುಂಡು ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಟ್ರೋಲ್ ಕೂಡ ಆಗಿದ್ದಾರೆ.
ಸದ್ಯ ಹೊಸ ಫೋಟೊಶೂಟ್ನಲ್ಲಿ ಕಿರಿಕ್ ಬೆಡಗಿ ಹಾಟ್ ಹಾಟ್ ಪೋಸ್ ಕೊಟ್ಟಿದ್ದಾರೆ. ಕ್ಲಿವೇಜ್ ಶೋ, ಥೈಸ್ ಶೋ ಮಾಡುತ್ತಾ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ್ದಾರೆ. ಬ್ಲ್ಯಾಕ್ ಡ್ರೆಸ್ನಲ್ಲಿ ಕೊಂಚ ಬೋಲ್ಡ್ ಆಗಿಯೇ ದರ್ಶನ ಕೊಟ್ಟಿದ್ದಾರೆ. ಅಡಿಯಿಂದ ಮುಡಿವರೆಗೆ ಅಂದ ಚೆಂದ ಪ್ರದರ್ಶಿಸುತ್ತಾ ರಂಗೇರಿಸಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k