ಸೌತ್ ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಮಿರ ಮಿರ ಮಿಂಚ್ತಿರುವ ಲಕ್ಕಿ ನಟಿ ರಶ್ಮಿಕಾ ಮಂದಣ್ಣ ಸದಾ ಸುದ್ದಿಯಲ್ಲಿರುತ್ತಾರೆ. ಈಗ ತಮ್ಮ ಫೋಟೋಶೂಟ್ನ ಚೆಂದದ ಮೇಕಿಂಗ್ ವಿಡಿಯೋ ಶೇರ್ ಮಾಡಿ, ನೆಟ್ಟಿಗರ ಗಮನ ಸೆಳೆದಿದ್ದಾರೆ.
ಪಂಚಭಾಷಾ ನಾಯಕಿಯಾಗಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ `ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣ, ತಮ್ಮ ಫೋಟೋಶೂಟ್ನ ಮೇಕಿಂಗ್ ತುಣುಕನ್ನ ಶೇರ್ ಮಾಡಿದ್ದಾರೆ. ವೈಟ್ ಕಲರ್ ಸ್ಲೀವ್ಲೇಸ್ ಟೀ ಶರ್ಟ್ ಜತೆ ಜೀನ್ಸ್ ಪ್ಯಾಂಟ್ ಮತ್ತು ಜರ್ಕಿನ್ನಲ್ಲಿ ರಶ್ಮಿಕಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಫೋಟೋಶೂಟ್ ಮಾಡುವಾಗ ತೆರೆಹಿಂದಿನ ಕ್ಷಣವನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಟ್ಟೆನೇ ಹಾಕ್ದೆ ಶೋಕಿ ಮಾಡ್ತಿರುವ ಉರ್ಫಿ ವಿಚಿತ್ರ ಅವತಾರಕ್ಕೆ ದಂಗಾದ ಫ್ಯಾನ್ಸ್
View this post on Instagram
ಇನ್ನು `ಪುಷ್ಪ 2′, ಅನಿಮಲ್, ವಾರಿಸು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಸದ್ಯ ಮಲಯಾಳಂನ ಡೆಬ್ಯು ಸಿನಿಮಾ `ಸೀತಾ’ ರಾಮಂ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.