ಮಹಿಳಾ ಪ್ರಧಾನ ಚಿತ್ರದಲ್ಲಿ ಮಿಂಚಲು ಸಜ್ಜಾದ ರಶ್ಮಿಕಾ ಮಂದಣ್ಣ

Public TV
1 Min Read
rashmika mandanna 1 1

ಕ್ಕಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸೌತ್ ಮತ್ತು ಬಾಲಿವುಡ್ ರಂಗದಲ್ಲಿ ಛಾಪೂ ಮೂಡಿಸಿದ್ದಾರೆ. ಪರಭಾಷೆಗಳಲ್ಲಿ ನಾನಾ ತರಹದ ಪಾತ್ರಗಳ ಮೂಲಕ ಮನಗೆದ್ದಿರುವ ನಟಿ ರಶ್ಮಿಕಾ, ಇದೀಗ ಮೊದಲ ಬಾರಿಗೆ Female Lead  ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ: ಅಪ್ಪ ಅಂದು ಬೆನ್ನ ಮೇಲೆ ಕೊಟ್ಟ ಆ ಸಣ್ಣ ಏಟು ನನ್ನನ್ನು ಬದಲಾಯಿಸಿತು: ಪ್ರಭುದೇವ

rashmika mandanna 5

ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ಚಿತ್ರದ ಮೂಲಕ ಸಿನಿ ಕೆರಿಯರ್ ಶುರು ಮಾಡಿದ ನಟಿ ರಶ್ಮಿಕಾ, ಸೌತ್- ಬಾಲಿವುಡ್‌ನಲ್ಲಿ ಸೆಟಲ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಶೈನ್ ಆಗ್ತಿದ್ದಾರೆ. ಈವರೆಗೂ 18 ಸಿನಿಮಾಗಳಲ್ಲಿ ನಟಿಸಿರುವ ಪುಷ್ಪ ನಟಿ, ಇದೀಗ ಹೊಸ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

rashmika mandanna 1

ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ಪ್ರತಿ ನಟಿಯ ಕನಸಾಗಿರುತ್ತದೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿ ಗೆದ್ದವರು ತೀರಾ ಕಡಿಮೆ ನಾಯಕಿಯರು. ನಯನತಾರಾ, ಅನುಷ್ಕಾ ಶೆಟ್ಟಿ, ಸಮಂತಾ (Samantha), ಇವರೆಲ್ಲರೂ ಫೀಮೇಲ್ ಓರಿಯೆಂಟೆಡ್ ಚಿತ್ರಗಳಲ್ಲಿ ನಟಿಸಿ ಜಯ ಸಾಧಿಸಿದ್ದಾರೆ. ಇದೀಗ ಈ ಹಾದಿಯಲ್ಲಿ ರಶ್ಮಿಕಾ ಮಂದಣ್ಣ ಹೆಜ್ಜೆ ಇಟ್ಟಿದ್ದಾರೆ.

ಈಗಾಗಲೇ ಮಹಿಳಾ ಪ್ರಧಾನ ಚಿತ್ರದ ಕಥೆ ಕೇಳಿ ರಶ್ಮಿಕಾ ಓಕೆ ಎಂದಿದ್ದಾರೆ. ಮೊದಲ ಬಾರಿಗೆ ಸ್ತಿç ಪ್ರಧಾನ ಚಿತ್ರದಲ್ಲಿ ನಟಿಸುತ್ತಿರುವ ಕಾರಣ, ಅದಕ್ಕಾಗಿ ನಟಿ ಸಕಲ ತಯಾರಿ ಮಾಡ್ತಿದ್ದಾರೆ. ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ರಶ್ಮಿಕಾ, ಹೊಸ ಸಿನಿಮಾವನ್ನ ನಿರ್ಮಾಣ ಮಾಡ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.

Share This Article