ಶ್ರೀವಲ್ಲಿ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಕಿರುತೆರೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ

Public TV
1 Min Read
rashmika mandanna

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ನಟಿ ಈಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ದೇಶದ ಎಲ್ಲಾ ಕಡೆ ಅಪಾರ ಅಭಿಮಾನಿಗಳ ಪ್ರೀತಿ ಪಡೆದಿರುವ ಶ್ರೀವಲ್ಲಿ ಈ ಸುದ್ದಿ ಮೂಲಕ ಸೂಪರ್ ಸರ್ಪ್ರೈಸ್ ಕೊಟ್ಟಿದ್ದಾರೆ.

rashmika mandanna 1

ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಸ್ಟಾರ್ ನಟರಿಗೆ ನಾಯಕಿಯಾಗಿ ಗೆದ್ದಿರುವ ರಶ್ಮಿಕಾ ಈಗ ಟಿವಿ ಪರದೆಗೆ ಎಂಟ್ರಿ ಕೊಟ್ಟಿದ್ದಾರೆ. ಸೀರಿಯಲ್‌ಗಾ? ಅಲ್ಲವೇ ಅಲ್ಲ. ತೆಲುಗಿನ ‘ಇಂಡಿಯನ್ ಐಡಿಲ್ -3’ (Indian Idol -3) ಶೋಗೆ ಅತಿಥಿಯಾಗಿ ಭಾಗವಹಿಸಿದ್ದಾರೆ. ಇದನ್ನೂ ಓದಿ:ಮಕ್ಕಳ ಜೊತೆ ರಾಧಿಕಾ ಪಂಡಿತ್ ವೆಕೇಷನ್- ಯಶ್ ಎಲ್ಲಿ ಎಂದ ಫ್ಯಾನ್ಸ್

rashmika mandanna 1 1

ಸಿಂಗಿಂಗ್ ಶೋನಲ್ಲಿ ಅದ್ಧೂರಿಯಾಗಿ ರಶ್ಮಿಕಾರನ್ನು ಸ್ವಾಗತಿಸಿರುವ ಪ್ರೋಮೋವೊಂದನ್ನು ವಾಹಿನಿ ರಿಲೀಸ್ ಮಾಡಿದೆ. ಇದೇ ಆಗಸ್ಟ್ 2 ಮತ್ತು 3ರಂದು ಸಂಜೆ 7 ಗಂಟೆ ಶೋ ಪ್ರಸಾರವಾಗಲಿದೆ. ಇನ್ನೂ ನಟಿಯ ಧ್ವನಿ ಚೆನ್ನಾಗಿದೆ. ಆದರೆ ಇಲ್ಲಿಯವರೆಗೂ ಅವರು ಎಲ್ಲೂ ಹಾಡಿಲ್ಲ. ಹಾಡಿನ ಶೋಗೆ ಬಂದ್ಮೇಲೆ ಅಭಿಮಾನಿಗಳಿಗೋಸ್ಕರ ನಟಿ ಹಾಡ್ತಾರಾ? ಕಾದುನೋಡಬೇಕಿದೆ.

ಅಂದಹಾಗೆ, ಪುಷ್ಪ 2, ಅನಿಮಲ್ 2, ರೈನ್‌ಬೋ, ಚಾವಾ, ಕುಬೇರ, ಸಿಖಂದರ್, ದಿ ಗರ್ಲ್‌ಫ್ರೆಂಡ್ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ. ಪ್ರಸ್ತುತ ‘ಪುಷ್ಪ 2’ (Pushpa 2) ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಡಿ.6ರಂದು ರಿಲೀಸ್ ಆಗ್ತಿದೆ.

Share This Article