ಚಂದನವನದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ(Rashmika Mandanna) ಇದೀಗ ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಅಬುದಾಬಿಯ ಸುಂದರ ತಾಣದಲ್ಲಿ ಹಾಟ್ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ.
ಬಾಲಿವುಡ್(Bollywood) ಮತ್ತು ಟಾಲಿವುಡ್ನ(Tollywood) ಸಾಲು ಸಾಲು ಸಿನಿಮಾಗಳಲ್ಲಿ ಲಕ್ಕಿ ನಟಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಸದಾ ಒಂದಲ್ಲಾ ಒಂದು ಹಾಟ್ ಟಾಪಿಕ್ ಮೂಲಕ ನಟಿ ಸದ್ದು ಮಾಡುತ್ತಾರೆ. ಅಬುದಾಬಿಯ ಸುಂದರ ತಾಣದಲ್ಲಿ ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ರಶ್ಮಿಕಾ ಮಂದಣ್ಣ (Rashmika Mandanna) ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸಮಂತಾ ಬದುಕಿನಲ್ಲಿ ಮತ್ತೆ ಬ್ರೇಕಪ್ ಬಿರುಗಾಳಿ
ವಿಭಿನ್ನ ಉಡುಗೆಯಲ್ಲಿ ಹಾಟ್ ಆಗಿ ಮಿಂಚಿದ್ದಾರೆ. ಗೋಲ್ಡನ್ ಗರ್ಲ್ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಫೋಟೋಶೂಟ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ರಶ್ಮಿಕಾ ನಟನೆಯ `ಗುಡ್ ಬೈ’ ಚಿತ್ರದ ನಂತರ `ಪುಷ್ಪ 2′(Pushpa 2) ಚಿತ್ರದತ್ತ ಮುಖ ಮಾಡಿದ್ದಾರೆ. `ಅನಿಮಲ್’, ಮಿಷನ್ ಮಜ್ನು, ವಾರಿಸು, ಚಿತ್ರಗಳ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ.