ಕನ್ನಡದ ಸಿನಿಮಾ ಮೂಲಕ ತಮ್ಮ ಸಿನಿ ಜೀವನ ಪ್ರಾರಂಭಿಸಿದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾಲಿವುಡ್‌ನಲ್ಲೇ ಸೆಟಲ್ ಆಗುವ ಸೂಚನೆ ಸಿಕ್ಕಿದೆ. ಈಗಾಗಲೇ ನಟಿಸಿರುವ ಬಾಲಿವುಡ್‌ನ ಒಂದು ಸಿನಿಮಾಗಳು ತೆರೆಕಂಡಿಲ್ಲ. ಆದರೂ ರಶ್ಮಿಕಾ ಮಂದಣ್ಣಗೆ ದಿನದಿಂದ ದಿನಕ್ಕೆ ಡಿಮ್ಯಾಂಡ್ ಜಾಸ್ತಿಯಾಗುತ್ತಿದೆ.
ರಶ್ಮಿಕಾ ಮಂದಣ್ಣ ಬತ್ತಳಿಕೆಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಪುಷ್ಪ ಚಿತ್ರದ ಸಕ್ಸಸ್ ನಂತರ ರಶ್ಮಿಕಾ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಕಾಯ್ತಿದ್ದಾರೆ. ಇನ್ನು ನಟಿ ಸೌತ್ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಿರೋ ಬೆನ್ನಲ್ಲೇ ಮತ್ತೊಂದು ಬಿಟೌನ್‌ನ ಬಿಗ್ ಪ್ರಾಜೆಕ್ಟ್‌ಗೆ ಆಯ್ಕೆಯಾಗಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ಆಶಿಕಿ ಸಿನಿಮಾ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿತ್ತು. `ಆಶಿಕಿ 2′ ಕೂಡ ಗಲ್ಲಾಪೆಟ್ಟಿಗೆ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಇದೀಗ `ಆಶಿಕಿ 3′ (Aashiqui-3) ಸಿನಿಮಾವನ್ನ ತೆರೆಯ ಮೇಲೆ ತರಲು ಭರ್ಜರಿ ತಯಾರಿ ನಡೆಯುತ್ತಿದೆ. ಈ ಚಿತ್ರಕ್ಕೆ ಕಾರ್ತಿಕ್ ಆರ್ಯನ್ (Karthik Aryan) ಮತ್ತು ರಶ್ಮಿಕಾರನ್ನ ಜೋಡಿಯಾಗಿ ತೋರಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೊಸ ರೊಮ್ಯಾಂಟಿಕ್ ಕಥೆಯ ಮೂಲಕ ಕಾರ್ತಿಕ್ ಮತ್ತು ರಶ್ಮಿಕಾ ಮೋಡಿ ಮಾಡೋದು ಗ್ಯಾರೆಂಟಿ ಅಂತಿದ್ದಾರೆ ಬಿಟೌನ್ ಮಂದಿ. ಇದನ್ನೂ ಓದಿ:ʻಲೈಗರ್ʼ ಸಿನಿಮಾ ಸೋತರೂ ವಿಜಯ್ ದೇವರಕೊಂಡಗೆ ಬಂಪರ್ ಆಫರ್
ಇನ್ನೂ ರಶ್ಮಿಕಾ ನಟನೆಯ ಬಾಲಿವುಡ್‌ನ `ಗುಡ್ ಬೈ’, `ಮಿಷನ್ ಮಜ್ನು’, ಅನಿಮಲ್ ಚಿತ್ರಗಳು ರೆಡಿಯಿದೆ. ಬಿಟೌನ್‌ನಲ್ಲೂ ರಶ್ಮಿಕಾ ಮಂದಣ್ಣ ಮ್ಯಾಜಿಕ್ ಮಾಡುತ್ತಾರಾ ಅಂತಾ ಕಾದುನೋಡಬೇಕಿದೆ.