ಬ್ಲ್ಯಾಕ್ ಬ್ಯೂಟಿಯಾದ ರಶ್ಮಿಕಾ- ‘ಪುಷ್ಪ’ ಇನ್ ಫೈಯರ್ ಎಂದ ಫ್ಯಾನ್ಸ್

Public TV
2 Min Read
rashmika mandanna 1 2

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್ (Bollywood) ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹುಬೇಡಿಕೆಯ ನಟಿಯಾಗಿ ಪಡ್ಡೆಹುಡುಗರ ನ್ಯಾಶನಲ್ ಕ್ರಶ್ ಆಗಿ ಗಮನ ಸೆಳೆಯುತ್ತಿದ್ದಾರೆ. ಇದರ ನಡುವೆ ಬ್ಲ್ಯಾಕ್ ಬ್ಯೂಟಿಯಾಗಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ಶ್ರೀವಲ್ಲಿ ನಯಾ ಲುಕ್ ನೋಡುಗರ ಗಮನ ಸೆಳೆಯುತ್ತಿದೆ.‌ ಇದನ್ನೂ ಓದಿ:ಮದುವೆಯಾಗಿ 12 ವರ್ಷಗಳ ನಂತರ ಲವ್‌ ಬ್ರೇಕಪ್‌ ಬಗ್ಗೆ ಬಾಯ್ಬಿಟ್ಟ ‘ರವಿಶಾಸ್ತ್ರಿ’ ನಟಿ ಸ್ನೇಹಾ

rashmika mandanna 4

ಕಪ್ಪು ಬಣ್ಣದ ಧಿರಿಸಿನಲ್ಲಿ ಮಿರ ಮಿರ ಅಂತ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ರಶ್ಮಿಕಾ ನಿಂತಿರುವ ಭಂಗಿ ಮತ್ತು ಆಕೆಯ ಕಿಲ್ಲಿಂಗ್ ಲುಕ್ ಪಡ್ಡೆಹುಡುಗರ ದಿಲ್ ಕದ್ದಿದೆ. ಶ್ರೀವಲ್ಲಿಯ ಫೋಟೋ ನೋಡಿ ಅಭಿಮಾನಿಗಳು ಪುಷ್ಪ ಇನ್ ಫೈಯರ್ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ:‘ಕೆಜಿಎಫ್’ ಚಿತ್ರವನ್ನು ಕಿರುಚಾಡುತ್ತಲೇ ರಿವ್ಯೂ ಮಾಡಿದ್ದ ಯೂಟ್ಯೂಬರ್ ನಿಧನ

rashmika mandanna 1 3

‘ಪುಷ್ಪ’ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಶ್ರೀವಲ್ಲಿ ಮಿಂಚಿದ್ದರು. ಪುಷ್ಪ ಪಾರ್ಟ್ ಒನ್‌ಗಿಂತ ಭಾಗ 2ರಲ್ಲಿ ನಟಿಯ ಲುಕ್ ವಿಭಿನ್ನವಾಗಿದೆ. ಕತ್ತಿನಲ್ಲಿ ಬಂಗಾರ ಹೇರಿಕೊಂಡು ಕಣ್ಣಿನ ಬಳಿ ಕೈ ಹಿಡಿದು ಸೂಪರ್ ಎಂದು ರಶ್ಮಿಕಾ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ನಟಿಗೆ ಚಿತ್ರತಂಡ ಹುಟ್ಟುಹಬ್ಬಕ್ಕೆ ಶುಭಕೋರಿದೆ. ಮುಗ್ಧ ಹುಡುಗಿಯಂತಿದ್ದ ಶ್ರೀವಲ್ಲಿ ಇದೀಗ ರೆಬೆಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

rashmika mandanna 2 1

‘ಪುಷ್ಪ’ ಪಾರ್ಟ್ 2ಗೆ ‘ಪುಷ್ಪ: ದಿ ರೈಸ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಮೊದಲ ಭಾಗದಲ್ಲಿ ಕೇವಲ ಕಾರ್ಮಿಕನಂತಿದ್ದ ಪುಷ್ಪರಾಜ್ ಈಗ ರಕ್ತಚಂದನದ ಕಳ್ಳಸಾಗಣೆಯಲ್ಲಿ ಆತನೇ ಕಿಂಗ್‌ಪಿನ್ ಆಗಿ ಬೆಳೆದಿರುತ್ತಾನೆ. ಮೊದಲ ಭಾಗದಲ್ಲಿ ವಿದೇಶದ ರೆಫರೆನ್ಸ್ ನೀಡಲಾಗಿತ್ತು. ರಕ್ತಚಂದನ ಜಪಾನ್‌ಗೆ ರಫ್ತಾಗಲಿದೆ ಎಂದು ತೋರಿಸಲಾಗಿತ್ತು. ಈಗ ಎರಡನೇ ಭಾಗದಲ್ಲಿ ಸಿನಿಮಾದ ಒಂದಷ್ಟು ಕಥೆ ವಿದೇಶದಲ್ಲೇ ನಡೆದಿದೆ ಎನ್ನಲಾಗಿದೆ. ಮೊದಲ ಭಾಗಕ್ಕಿಂತ 2ನೇ ಭಾಗ ದೊಡ್ಡದಾಗಿ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.

FotoJet 24

ಚಿತ್ರದಲ್ಲಿ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna), ಕನ್ನಡದ ಡಾಲಿ ಧನಂಜಯ್ ಸೇರಿದಂತೆ ಹಲವರು ನಟಿಸಿದ್ದಾರೆ. ಇದೇ ಆಗಸ್ಟ್ 15ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

ಪುಷ್ಪ 2 (Pushpa 2) ಸಿನಿಮಾದ ಜೊತೆ ಅನಿಮಲ್ ಪಾರ್ಕ್, ದಿ ಗರ್ಲ್‌ಫ್ರೆಂಡ್, ಚಾವಾ, ರೈನ್‌ಬೋ‌ (Rainbow Film) ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿದೆ.

Share This Article