ಮತ್ತೆ ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

Public TV
2 Min Read
rashmika mandanna 1 2

ಟಾಲಿವುಡ್‌ನ (Tollywood) ಚೆಂದದ ಕಪಲ್ ಅಂದರೆ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ (Rashmika Mandanna) ತೆರೆ ಹಿಂದೆ ಅದೇನೇ ಕುಚ್ ಕುಚ್ ಕಹಾನಿ ನಡೀತಾ ಇದ್ರೂ, ತೆರೆಯ ಮೇಲೆ ಬೆಸ್ಟ್ ಕಪಲ್ ಆಗಿ ಜನರ ಮನಗೆದ್ದಿದ್ದಾರೆ. ಇದೀಗ ‘ಗೀತಾ ಗೋವಿಂದಂ’ (Geetha Govindam) ಜೋಡಿ ಮತ್ತೆ ಒಟ್ಟಿಗೆ ಸಿನಿಮಾ ಮಾಡ್ತಾರೆ ಎಂಬ ಬಿಸಿ ಬಿಸಿ ಸುದ್ದಿ ಸಿಕ್ಕಿದೆ.

RASHMIKA MANDANNA 2

ವಿಜಯ್ ದೇವರಕೊಂಡ (Vijay Devarakonda) ಸಿನಿಮಾದಲ್ಲಿ ಇದ್ದಾರೆ ಎಂದರೆ ಅಲ್ಲಿ ಲವ್, ರೊಮ್ಯಾನ್ಸ್, ಲಿಪ್ ಲಾಕ್ ಇರೋದಂತೂ ಪಕ್ಕಾ. ಆ್ಯಕ್ಷನ್ ಸೀನ್ಸ್ ಜೊತೆ ಹಸಿಬಿಸಿ ದೃಶ್ಯಗಳು ಇದ್ದೇ ಇರುತ್ತದೆ. ಕಂಟೆಂಟ್ ಜೊತೆ ಪಡ್ಡೆಹುಡುಗರಿಗೆ ಬೇಕಾಗುವಂತಹ ಸಿನಿಮಾ ಮಾಡೋದ್ರಲ್ಲಿ ವಿಜಯ್ ಎತ್ತಿದ ಕೈ. ಹೀಗಿರುವಾಗ ವಿಜಯ್- ರಶ್ಮಿಕಾ ನಟನೆಯ ‘ಗೀತಾ ಗೋವಿಂದಂ’ ಸಿನಿಮಾ ಸಿನಿರಸಿಕರಿಗೆ ಕ್ರೇಜ್ ಹುಟ್ಟುಹಾಕಿತ್ತು. ಇಬ್ಬರು ನಟಿಸಿದ ಮೊದಲ ಸಿನಿಮಾನೇ ಸೂಪರ್ ಡೂಪರ್ ಹಿಟ್ ಆಗಿತ್ತು. ಇದನ್ನೂ ಓದಿ:ದಾಂಪತ್ಯಕ್ಕೆ ಅಂತ್ಯ ಹಾಡಿದ ನಟಿ, ಡಿವೋರ್ಸ್ ಬಗ್ಗೆ ಬಿಗ್ ಬಾಸ್ ಚೈತ್ರಾ ಅಪ್‌ಡೇಟ್

rashmika mandanna

ನಂತರ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ವಿಜಯ್-ರಶ್ಮಿಕಾ ಜೋಡಿಯಾಗಿ ನಟಿಸಿದ್ರು. ಈ ಸಿನಿಮಾ ಗಲ್ಲಾಪೆಟ್ಟಿಗೆ ಶೇಕ್ ಮಾಡೋದ್ರಲ್ಲಿ ಸೋಲ್ತು. ಆದರೆ ಇಬ್ಬರ ಕೆಮಿಸ್ಟ್ರಿ ವರ್ಕ್ಔಟ್ ಆಯ್ತು. ಈ ಚಿತ್ರದಿಂದ ವಿಜಯ್-ರಶ್ಮಿಕಾ ಮತ್ತಷ್ಟು ಕ್ಲೋಸ್ ಆದ್ರು. ತೆರೆ ಹಿಂದೆ ಇಬ್ಬರು ಆಗಾಗ ಟ್ರಿಪ್, ಪಾರ್ಟಿ ಅಂತಾ ಜೊತೆಯಾಗ್ತಾರೆ. ಆದ್ರೂ ನಮ್ಮ ನಡುವೆ ಏನಿಲ್ಲ ಅಂತಾ ಕಥೆ ಹೇಳ್ತಾರೆ. ತೆರೆ ಹಿಂದಿನ ಫ್ರೆಂಡ್‌ಶಿಪ್ ಬಗ್ಗೆ ಇಬ್ಬರು ಗಪ್‌ಚುಪ್ ಅಂತಾ ಇದ್ರೂ ಕೂಡ ಸದಾ ಒಂದಲ್ಲಾ ಒಂದು ವಿಚಾರವಾಗಿ ಜೋಡಿ ಸುದ್ದಿಯಾಗುತ್ತಾರೆ. ಈಗ ಇಬ್ಬರು ಜೊತೆಯಾಗಿ ಸಿನಿಮಾ ಮಾಡುವ ಬಗ್ಗೆ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ.

ಸಮಂತಾ ಜೊತೆ ಖುಷಿ ಸಿನಿಮಾವನ್ನ ವಿಜಯ್ ಮುಗಿಸಿಕೊಂಡಿದ್ದಾರೆ. ಮೃಣಾಲ್ ಠಾಕೂರ್- ಶ್ರೀಲೀಲಾ (Sreeleela) ಜೊತೆಗಿನ ಎರಡು ಸಿನಿಮಾ ಮುಗಿದ ಮೇಲೆ ರಶ್ಮಿಕಾ ಮಂದಣ್ಣ ಜೊತೆ ಮತ್ತೆ ವಿಜಯ್ ದೇವರಕೊಂಡ ರೊಮ್ಯಾನ್ಸ್ ಮಾಡೋದು ಪಕ್ಕಾ ಎಂದು ಹೇಳಲಾಗುತ್ತಿದೆ. ರಶ್ಮಿಕಾ ಕೂಡ ಅಷ್ಟರಲ್ಲಿ ಒಪ್ಪಿಕೊಂಡಿರುವ ಸಿನಿಮಾಗಳ ಮುಗಿಸಿಕೊಡ್ತಾರೆ. ಮತ್ತೆ ಗೀತಾ ಗೋವಿಂದಂ ಜೋಡಿ ಆನ್‌ಸ್ಕ್ರೀನ್‌ನಲ್ಲಿ ಜೊತೆಯಾಗೋದು ರೊಮ್ಯಾನ್ಸ್ ಮಾಡೋದು ಪಕ್ಕಾ. ಸೂಕ್ತ ಎಂದೆನಿಸುವ ಭಿನ್ನ ಕಥೆಯೊಂದಿಗೆ ಈ ಜೋಡಿ ಮತ್ತೆ ಜೊತೆ ಆಗ್ತಾರೆ. ಅಧಿಕೃತ ಅಪ್‌ಡೇಟ್ ಸಿಗೋವರೆಗೂ ಕಾಯಬೇಕಿದೆ.

Share This Article