ರಾಜಕೀಯ ಕಾರಣಕ್ಕಾಗಿ ಈವರೆಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವಿಟ್ ಮಾಡುತ್ತಿದ್ದರು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ. ಇದೇ ಮೊದಲ ಬಾರಿಗೆ ಅವರು ಸಿನಿಮಾವೊಂದರ ಟ್ರೈಲರ್ ನೋಡುವಂತೆ ಪ್ರಧಾನಿಗೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ ರಮ್ಯಾ. ಅದು ಹೊಸ ಯುವಕರೇ ಸೇರಿಕೊಂಡು ಮಾಡಿರುವ ಮೈಸೂರು ಆರ್ಕೆಸ್ಟ್ರಾ ಚಿತ್ರದ ಟ್ರೈಲರ್ ಎನ್ನುವುದು ವಿಶೇಷ.
Advertisement
ನಿನ್ನೆ ರಮ್ಯಾ ಅವರು ಮೈಸೂರು ಪೂರ್ಣಾ, ನಾಗಭೂಷಣ್ ಸೇರಿದಂತೆ ಹಲವರು ನಟಿಸಿರುವ ‘ಮೈಸೂರು ಆರ್ಕೆಸ್ಟ್ರಾ’ ಸಿನಿಮಾದ ಟ್ರೈಲರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ರಿಲೀಸ್ ಮಾಡಿದ್ದರು. ಟ್ರೈಲರ್ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಈ ಬೆನ್ನೆಲ್ಲೇ ಕರ್ನಾಟಕಕ್ಕೆ ಆಗಮಿಸಿದ್ದ, ಅದರಲ್ಲೂ ಯೋಗ ದಿನದಂದು ಮೈಸೂರಿನಲ್ಲೇ ಬೀಡು ಬಿಟ್ಟಿದ್ದ ಪ್ರಧಾನಿ ಅವರಿಗೆ ಮೈಸೂರು ಸಂಸ್ಕೃತಿಯನ್ನು ತಿಳಿದುಕೊಳ್ಳಲು ಮೈಸೂರು ಆರ್ಕೆಸ್ಟ್ರಾ ಸಿನಿಮಾದ ಟ್ರೈಲರ್ ನೋಡಿ ಎಂದು ಟ್ವಿಟ್ ಮಾಡಿದ್ದರು. ಅಲ್ಲದೇ, ಮೈಸೂರಿನ ಪ್ರಸಿದ್ಧ ದೋಸೆ ಮೈಲಾರಿ ಬೆಣ್ಣೆ ದೋಸೆ ಸವಿಯಿರಿ ಎಂದೂ ಅವರು ಬರೆದಿದ್ದರು. ಇದನ್ನೂ ಓದಿ:ದಿಗಂತ್ ಗೆ ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ : ಅಬ್ಸರ್ವೇಶನ್ ನಲ್ಲಿ ನಟ
Advertisement
Advertisement
ಆರ್ಕೆಸ್ಟ್ರಾ ಕಟ್ಟಿಕೊಂಡು ಹೆಸರು ಮಾಡಲು ಹೊರಡುವ ಯುವಕನೊಬ್ಬನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದ್ದು, ಸುನಿಲ್ ಮೈಸೂರು ಈ ಸಿನಿಮಾದ ನಿರ್ದೇಶಕ. ಮೈಸೂರಿನ ಕೆಲ ಯುವಕರೇ ಸೇರಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಡಾಲಿ ಧನಂಜಯ್ ಈ ತಂಡದ ಬೆನ್ನೆಲುವಾಗಿ ನಿಂತಿದ್ದಾರೆ. ಬಹುತೇಕ ಡಾಲಿ ಸ್ನೇಹಿತರೇ ಈ ಸಿನಿಮಾದಲ್ಲಿದ್ದು, ರಾಜಲಕ್ಷ್ಮೀ ನಾಯಕಿಯಾಗಿ ನಟಿಸಿದ್ದಾರೆ.